ಅನ್ಯಕಾರ್ಯದ ಹೊರೆಯಿಂದ ಶಿಕ್ಷಣದ ಗುಣಮಟ್ಟ ಕುಸಿತ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಲಿಸುವದಕ್ಕೆ ಶಿಕ್ಷಕ ಸೀಮಿತವಾಗಿದ್ದ ಸಂದರ್ಭದಲ್ಲಿ ಶಿಕ್ಷಣದ ಗುಣಮಟ್ಟ ತೃಪ್ತಿದಾಯಕವಾಗಿತ್ತು. ಆದರೆ ಇಂದು ವಿವಿಧ ಕಾರ್ಯಗಳ ಹೊರೆಯಿಂದ ಬೋಧನೆ ಮತ್ತು ಕಲಿಕಾ ಸಮಯದ ಕೊರತೆಯಿಂದ ಶೈಕ್ಷಣಿಕ ಮಟ್ಟ ಕುಸಿತ ಕಂಡಿದೆ. ಶಿಕ್ಷಕರ ಕೊರತೆಯೂ ಇದಕ್ಕೆ ಕಾರಣವಾಗಿದೆ ಎಂದು ಶಿಕ್ಷಣ ಚಿಂತಕ ಎಫ್.ಸಿ. ಚೇಗರಡ್ಡಿ ಅಭಿಪ್ರಾಯಪಟ್ಟರು

Advertisement

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಗದಗ ವತಿಯಿಂದ ಗದುಗಿನ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ, ಕ.ಸಾ.ಪ ಕಾರ್ಯಾಲಯದಲ್ಲಿ ಶಿಕ್ಷಕ ದಿನಾಚರಣೆ ಅಂಗವಾಗಿ ಜರುಗಿದ ಶೈಕಣಿಕ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದರು.

ಶಾಲೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಅಂತರ್ಜಾಲದ ಮುಖಾಂತರ ದಾಖಲಿಸಬೇಕಾಗಿದೆ. ಅಕ್ಷರ ದಾಸೋಹ, ದಾಖಲೆಗಳ ನಿರ್ವಹಣೆ, ಫಲಿತಾಂಶ ವೃದ್ಧಿ ಮುಂತಾದ ಒತ್ತಡದಿಂದ ಶಿಕ್ಷಕ ಸಮುದಾಯ ಖುಷಿಯಿಂದ ಬೋಧನೆ ಮಾಡುವ ಸಂದರ್ಭಗಳಿಂದ ವಂಚಿತರಾಗಿದ್ದಾರೆ. ಸರಕಾರಿ ಶಾಲೆಗಳ ವಿಲೀನದಿಂದ ತಳಸಮುದಾಯಗಳು ಶಿಕ್ಷಣದಿಂದ ದೂರ ಉಳಿಯುವ ಅಪಾಯವಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಉಪನಿರ್ದೇಶಕ ಎ.ಎನ್. ನಾಗರಳ್ಳಿ ಮಾತನಾಡಿ, ಅನ್ಯ ಕಾರ್ಯಗಳ ಹೊರೆಯಿಂದ ಶಿಕ್ಷಕರನ್ನು ಮುಕ್ತಗೊಳಿಸುವ ಬಗ್ಗೆ ಇಲಾಖೆ ಚಿಂತಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಪ್ರಯತ್ನಗಳ ಮೂಲಕ ಎಫ್.ಸಿ. ಚೇಗರಡ್ಡಿ ಗಮನ ಸೆಳೆದಿದ್ದಾರೆ. ಚಿಣ್ಣರ ಮೇಳ, ವಿಜ್ಞಾನ ಮೇಳ, ಮಕ್ಕಳ ಸಾಹಿತ್ಯ ಸಂಭ್ರಮದಂತಹ ಅನೇಕ ಕಾರ್ಯ ಚಟುವಟಿಕೆಗಳನ್ನು ರೂಪಿಸಿ ಸಂತಸ ಕಲಿಕೆಯ ವಿಚಾರಗಳನ್ನು ನಾಡಿನಾದ್ಯಂತ ಪಸರಿಸಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಒತ್ತಡಗಳ ಮಧ್ಯೆಯೂ ಶಿಕ್ಷಕರು ಸ್ವಯಂಸ್ಫೂರ್ತಿಯಿಂದಲೇ ಕಾರ್ಯನಿರ್ವಹಿಸುತ್ತಿರುವದರಿಂದ ಶಿಕ್ಷಣ ಕ್ಷೇತ್ರ ಇಂದಿಗೂ ಘನತೆಯನ್ನು ಹೊಂದಿದೆ. ಡೆಪ್ಯುಟಿ ಚನ್ನಬಸಪ್ಪನವರು ಕನ್ನಡ ಶಾಲೆಗಳ ಸ್ಥಾಪನೆಯ ಮೂಲಕ ಕನ್ನಡ ಸಂಸ್ಕೃತಿಯ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಕನ್ನಡ ಬೆಳವಣಿಗೆಯ ಹಿನ್ನೆಲೆಯಲ್ಲಿ ಕನ್ನಡ ಶಾಲೆಗಳನ್ನು ಉಳಿಸಿ-ಬೆಳೆಸುವ ದಿಸೆಯಲ್ಲಿ ಜನಾಂದೋಲನ ರೂಪುಗೊಳ್ಳಬೇಕಾದುದು ಅವಶ್ಯಕ ಎಂದು ತಿಳಿಸಿದರು.

ವೇದಿಕೆ ಮೇಲೆ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಉಪಸ್ಥಿತರಿದ್ದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ, ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್.ಬಾಪುರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಎಸ್.ಡಿ. ಗಾಂಜಿ, ಅನ್ನದಾನಿ ಹಿರೇಮಠ, ರಾಹುಲ ಗಿಡ್ನಂದಿ, ಶೇಖರಪ್ಪ ಕಳಸಾಪೂರಶೆಟ್ಟರ, ಕೆ.ಎಸ್. ಬಾಳಿಕಾಯಿ, ಬಿ.ಎಸ್. ಹಿಂಡಿ, ಬಿ.ಬಿ. ಹೊಳಗುಂದಿ, ಎಂ.ಎಫ್. ದೋಣಿ, ಶೈಲಾ ಗಿಡ್ನಂದಿ, ಶರಣಪ್ಪ ಹೊಸಂಗಡಿ, ಎಸ್.ವಿ. ಕುಂದಗೋಳ, ರಾಜಶೇಖರ ಕರಡಿ, ಸಿದ್ಧಲಿಂಗೇಶ ಸಜ್ಜನಶೆಟ್ರ, ರತ್ನಕ್ಕ ಪಾಟೀಲ, ಮೀನಾಕ್ಷಿ ಜಂಗಮನಿ, ಶಶಿಕಲಾ ಬಳ್ಳೊಳ್ಳಿ, ಶಿವಲಿಂಗಪ್ಪ ಅಣ್ಣಿಗೇರಿ, ಎಸ್.ಎಂ. ಕಾತರಕಿ, ಶಿಲ್ಪಾ ಹಳ್ಳಿಕೇರಿ, ಪ್ರಕಾಶ ಕರ್ಕಿಕಟ್ಟಿ, ಸಿದ್ದು ಮಾಳವಾಡ, ಶಶಿಕಾಂತ ಕೊರ್ಲಹಳ್ಳಿ, ರಾಜಶೇಖರ ದಾನರಡ್ಡಿ, ಈರಪ್ಪ ಸೊರಟೂರ, ಸಿ.ಎಂ. ಮಾರನಬಸರಿ, ಎಸ್.ಎ. ಆವಾರಿ, ಎಸ್.ಸಿ. ಹಾಳಕೇರಿ, ಜಯದೇವ ಮೆಣಸಗಿ, ನಿಂಗು ಸೊಲಗಿ, ಎ.ಸಿ. ಹಿರೇಮಠ, ಕೆ.ಎಸ್. ಗುಗ್ಗರಿ, ಎಸ್.ಎಲ್. ಕುಲಕರ್ಣಿ, ಆರ್.ಎಂ. ಠಾಣೇದ, ಎಸ್.ಐ. ಯಾಳಗಿ, ಅಶೋಕ ಗಿರಡ್ಡಿ, ಅಶೋಕ ಸತ್ಯರಡ್ಡಿ, ಎಂ.ಎಂ. ಕಾಗದಗಾರ, ಶ್ಯಾಮ ಲಾಂಡೆ, ಪ್ರೇಮಾ ಹಟ್ಟಿ, ರತ್ನಾಬಾಯಿ ಪುರಂತರ, ಎಂ.ಎಸ್. ಹಾಲಶೆಟ್ಟಿ, ಶಿಲ್ಪಾ ಮ್ಯಾಗೇರಿ, ಉಮಾ ಕಣವಿ, ಈಶ್ವರಪ್ಪ ಹಂಚಿನಾಳ, ಸುರೇಶ ಕುಂಬಾರ, ಬಿ.ಜಿ. ಗಿರಿತಿಮ್ಮಣ್ಣವರ, ರಮೇಶ ಲಮಾಣಿ, ಜಿ.ಬಿ. ಪಾಟೀಲ, ಬಿ.ವಾಯ್. ಡೊಳ್ಳಿನ, ವಿಶ್ವನಾಥ ಕಮ್ಮಾರ, ರವಿ ದೇವರಡ್ಡಿ ಮೊದಲಾದವರು ಭಾಗವಹಿಸಿದ್ದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಶಿಕ್ಷಕ ಸ್ಪಂದಿಸಬೇಕಾಗುತ್ತದೆ. ಇಲಾಖೆಯ ಯೋಜನೆಗಳು ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಹಿನ್ನೆಲೆಯಲ್ಲಿಯೇ ರೂಪಿತವಾಗಿವೆ. ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ದಿಸೆಯಲ್ಲಿ ಶಿಕ್ಷಕ ಸಮುದಾಯ ಪ್ರಯತ್ನಿಸಿ, ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here