ಹೋಳಿ ಸಂಭ್ರಮ ಹೆಚ್ಚಿಸಿದ ರಗ್ಗಲಿಗೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಹಿಂದೂ ಸಂಪ್ರದಾಯದ ವರ್ಷದ ಕೊನೆಯ ಹಬ್ಬವಾದ ಹೋಳಿ ಹುಣ್ಣಿಮೆಯನ್ನು ಇಲ್ಲಿಯ ಯುವಕರು ಮತ್ತು ಮಕ್ಕಳು ಸಂಭ್ರಮದಿಂದ ಆಚರಿಸಿದರು.

Advertisement

ಶುಕ್ರವಾರ ಬೆಳಿಗ್ಗೆ 8ಕ್ಕೆ ಆರಂಭವಾದ ಹೋಳಿ ಹಬ್ಬದ ಆಚರಣೆಯಲ್ಲಿ ಮಕ್ಕಳು ತಮ್ಮ ಸ್ನೇಹಿತರಿಗೆ ಪರಸ್ಪರ ಬಣ್ಣ ಹಾಕುವದರೊಂದಿಗೆ ಸಂಭ್ರಮಿಸಿದರು. ಗುರುವಾರ ರಾತ್ರಿಯೇ ವಿವಿಧ ಓಣಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕಾಮ-ರತಿಯರಿಗೆ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಹೋಳಿಗೆ ನೈವೇದ್ಯವನ್ನು ಅರ್ಪಿಸಲಾಯಿತು. ನಂತರ ಗಾಮದ ಪ್ರಮುಖ ಬೀದಿಗಳಲ್ಲಿ ಕಾಮ-ರತಿಯರನ್ನು ಗ್ರಾಮದೇವತೆ ಯುವಕ ಸಂಘದ ವತಿಯಿಂದ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ರಗ್ಗಲಿಗೆಗಳ ನಿನಾದ ಹೋಳಿ ಹುಣ್ಣಿಮೆ ಹಾಡಿನೊಂದಿಗೆ ಗಮನ ಸೆಳೆಯಿತು. ಕೆಲವು ಓಣಿಗಳಲ್ಲಿ ಮಹಿಳೆಯರು ಸಹ ಬಣ್ಣದ ಓಕುಳಿಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಇಲ್ಲಿಯ ಅಂಬೇಡ್ಕರ ನಗರದಲ್ಲಿ ಸಂಪ್ರದಾಯದಂತೆ ಸಗಣಿಯ ಕುಳ್ಳುಗಳನ್ನು ಸಂಗ್ರಹಿಸಿ ಕಾಮದಹನ ಕಾರ್ಯಕ್ರಮ ನೆರವೇರಿಸಲಾಯಿತು. ಈ ಅಗ್ನಿಯನ್ನು ತೆಗೆದುಕೊಂಡು ಹೋಗಿ ಗ್ರಾಮಚವಡಿ ಮುಂದೆ ಕಾಮನನ್ನು ದಹನ ಮಾಡಲಾಯಿತು. ನಂತರ ಮಧ್ಯಾಹ್ನದ ಹೊತ್ತಿಗೆ ವಿವಿಧ ಗಲ್ಲಿಗಳಲ್ಲಿ ಕಾಮದಹನ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಕಾಮ-ರತಿಯರ ಚಾರಿತ್ರೆಯ ಕುರಿತ ಹಾಡುಗಳು ಮೊಳಗಿದವು.


Spread the love

LEAVE A REPLY

Please enter your comment!
Please enter your name here