ವಿಜಯಸಾಕ್ಷಿ ಸುದ್ದಿ, ಗದಗ : ಸಮಾಜದಲ್ಲಿ ಅವಕಾಶವಂಚಿತ ವಿಶೇಷ ಮಕ್ಕಳಿಗೆ ಸೂಕ್ತವಾದ ಅವಕಾಶಗಳನ್ನು ಕಲ್ಪಿಸಿ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ತರಬೇತಿ ನೀಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿರುವ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯವಾಗಿದೆ. ವಿಶೇಷ ಮಕ್ಕಳಿಗೆ ತಾಳ್ಮೆಯಿಂದ ತರಬೇತಿ ನೀಡುತ್ತಿರುವ ಶಿಕ್ಷಕರ ಹಾಗೂ ಜನ್ಮ ನೀಡಿದ ತಂದೆ-ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಬದಲಾಗಿ ನಾವೆಲ್ಲರೂ ಇವರ ಸೇವೆ ಮಾಡೋಣ ಎಂದು ಮೌಲಾನಾ ಮಹ್ಮದರಫೀಕ ಶೇಖ ಮುಣಶಿ ಮಾಜಿಹಿರಿ ಹೇಳಿದರು.
ವಿಶ್ವ ಕಲ್ಯಾಣ ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ನಿರ್ಮಲಾ ಷಡಾಕ್ಷರಯ್ಯ ಕರಿಸಿದ್ಧಿಮಠವರು ಹಮ್ಮಿಕೊಂಡಿದ್ದ ದಿ. ಷಡಾಕ್ಷರಯ್ಯ. ಕರಿಸಿದ್ಧಿಮಠವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀರಲಗಿ ಗ್ರಾ.ಪಂ ಸದಸ್ಯ ಪ್ರಶಾಂತ ಪೂಜಾರ ಮಾತನಾಡಿ, ಇಂತಹ ಮಕ್ಕಳಲ್ಲಿರುವ ಸುಪ್ತವಾದ ಕೌಶಲ್ಯವನ್ನು ಹೊರಹೊಮ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬುದ್ಧಿಮಾಂದ್ಯ ಮಕ್ಕಳಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಇಂತಹ ಮಕ್ಕಳ ಸೇವೆ ಮಾಡುತ್ತಿರುವ ಈ ಸಂಸ್ಥೆಗೆ ಸಹಾಯ-ಸಹಕಾರ ನೀಡಬೇಕೆಂದರು.
ವಕೀಲರಾದ ಮುಕ್ತುಮ ಹುಸೇನ ಮುಲ್ಲಾ, ಮೆಹಬೂಬ ಹೊಸಳ್ಳಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಂಜುನಾಥ ಹದ್ದಣ್ಣವರವರ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ, ಶ್ರೀಮತಿ ನಿರ್ಮಲಾ ಷಡಾಕ್ಷರಯ್ಯ ಕರಿಸಿದ್ಧಿಮಠವರು ನಿರಂತರವಾಗಿ ಸಹಾಯ ಮಾಡುತ್ತಾ ನಮ್ಮ ಸೇವಾ ಕಾರ್ಯಕ್ಕೆ ಬೆನ್ನಲುಬಾಗಿ ನಿಂತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಂಜುನಾಥ ಆಸಂಗಿ, ಸುವರ್ಣಾ ತುಳಸಿಮನಿ, ಶಾಂತಮ್ಮಾ ಹೂಗಾರ, ಸಂಗಮೇಶ ವೀರಕ್ತಮಠ, ವಿಶೇಷ ಮಕ್ಕಳು, ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು.
ಖ್ಯಾತ ವಕೀಲರಾದ ಶೌಬುದ್ಧೀನ ನದಾಫ್ ಮಾತನಾಡಿ, ಸಮಾಜ ನಮಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ, ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದು ಮುಖ್ಯ. ದೈವ ಸ್ವರೂಪಿಗಳಾದ ವಿಶೇಷ ಚೇತನ ಮಕ್ಕಳ ಪ್ರತಿಭೆಯನ್ನು ಸಮಾಜಕ್ಕೆ ತೋರಿಸುವುದರ ಮೂಲಕ ಮುಖ್ಯವಾಹಿನಿಗೆ ತರುವ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಿರುವ ವಿಶ್ವ ಕಲ್ಯಾಣ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀವಾಗಿದೆ ಎಂದರು.
Advertisement