ರಾಯಚೂರು:– ಕಾರು ಡಿಕ್ಕಿಯಾದ ರಭಸಕ್ಕೆ ಕೃಷ್ಣಾ ನದಿಗೆ ಹಾರಿಬಿದ್ದು ಬೈಕ್ ಸವಾರ ನಾಪತ್ತೆ ಆಗಿರುವ ಘಟನೆ ತೆಲಂಗಾಣದ ಜುರಾಲಾ ಪ್ರಾಜೆಕ್ಟ್ ಬ್ಯಾರೇಜ್ ಮೇಲೆ ಜರುಗಿದೆ.
21 ವರ್ಷದ ಮಹೇಶ್ ನಾಪತ್ತೆಯಾದ ಯುವಕ. ಇನ್ನೋರ್ವ ಬೈಕ್ ಸವಾರ ಜಾನಕಿರಾಮ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಮೊಬೈಲ್ ನೋಡಿಕೊಂಡು ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ತೆಲಂಗಾಣದ ಧರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ. ಯುವಕನಿಗಾಗಿ ಶೋಧ ಮುಂದುವರಿದಿದೆ.



