ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಮಾಜದಲ್ಲಿ ಗುರುಗಳು ಮಹತ್ತರ ಸ್ಥಾನ ಹೊಂದಿದ್ದು, ಅವರ ಮಾರ್ಗದರ್ಶನವಿಲ್ಲದೆ ಯಾವುದೇ ಕಾರ್ಯ ಯಶಸ್ವಿಯಾಗಲು ಸಾಧ್ಯವಿಲ್ಲ. ಗುರು ಜ್ಞಾನದೆಡೆಗೆ ಕಣ್ಣು ತೆರೆಸುವವನು. ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಗುರುವಿನ ಕೃಪೆ ಅಗತ್ಯವಿದೆ ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಪಟ್ಟಣದ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ಮುಳಗುಂದ ಹೋಬಳಿ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಘಟಕಗಳ ಸೇವಾ ದೀಕ್ಷೆ ಹಾಗೂ ಹಡಪದ ಅಪ್ಪಣ್ಣ ಜಯಂತ್ಯುತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗದಗ ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಮಾತನಾಡಿ, ಹಡಪದ ಅಪ್ಪಣ್ಣ ನಿಜ ಸುಖದ ಬದುಕನ್ನು ತಮ್ಮ ಶರಣ ಸಾಹಿತ್ಯದ ಮೂಲಕ ತೋರಿಸಿಕೊಟ್ಟ ಮಹಾನ್ ಶರಣರು. ಮಕ್ಕಳಿಗೆ ಇಂತಹ ಶರಣರ ವಚನಗಳನ್ನು ಮನೆಯಲ್ಲಿ ಪಠಿಸುವ ಅಭ್ಯಾಸ ಬೆಳೆಸಬೇಕು. ಜಾತಿ, ಮತ, ಪಂಥ ಭೇದವಿಲ್ಲದ ಸಮಾನತೆಯ ಸಮಾಜ ನಿರ್ಮಿಸಲು ಶರಣರು ಸೂಚಿಸಿರುವ ಮಾರ್ಗದರ್ಶನ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಡಿ. ಬಟ್ಟೂರ ವಹಿಸಿದ್ದರು. ಡಾ. ಎಸ್.ಸಿ. ಚವಡಿ, ಬಿ.ಕೆ. ಹರಪನಹಳ್ಳಿ, ಎಸ್.ಎಂ. ಮರಿಗೌಡರ, ರಾಮಣ್ಣಾ ಕಮಾಜಿ, ಕುಮಾರ ಹಡಪದ, ಪಿ.ಎ. ವಂಟಕರ, ಬೂದಪ್ಪ ಅಂಗಡಿ, ಶಂಕ್ರಪ್ಪ ತೆಂಬದಮನಿ, ಮಂಜುನಾಥ ಮಟ್ಟಿ, ಪ್ರಕಾಶ ಮದ್ದಿನ, ರಾಜೇಶ್ವರಿ ಬಡ್ನಿ ಮತ್ತು ಎಂ.ಕೆ. ಲಮಾಣಿ ಉಪಸ್ಥಿತರಿದ್ದರು.



