ಬೆಂಗಳೂರು:- ಕೊಲೆ, ಕೊಲೆ ಯತ್ನ, ದರೋಡೆ ಸೇರಿ 23 ಕ್ಕೂ ಹೆಚ್ಚು ಪ್ರಕರಣದಲ್ಲಿ ಬೇಕಾಗಿದ್ದ ರೌಡಿ ಕುಳ್ಳಾ ರಿಜ್ವಾನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪರಪ್ಪನ ಅಗ್ರಹಾರ ದಲ್ಲಿದ್ದ ರೌಡಿ ರಿಜ್ವಾನ್ ನನ್ನು ಕೋಕಾ ಕಾಯ್ದೆ ಮೇಲೆ ಬೆಂಗಳೂರಿನ ತಲಘಟ್ಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆ.ಜಿ.ನಗರ, ಸುಬ್ರಹ್ಮಣ್ಯಪುರ, ಬನಶಂಕರಿ, ಕೊಡಿಗೇಹಳ್ಳಿ, ತಲಘಟ್ಟಪುರ, ಕಗ್ಗಲಿಪುರ, ಕೊತ್ತನೂರು, ಕೆ.ಎಸ್.ಲೇಔಟ್, ಚೆನ್ನಮ್ಮನಕೆರೆ ಅಚ್ಚುಕಟ್ಟು, ಕೆಂಗೇರಿ ಠಾಣೆ ರೌಡಿ ಶೀಟರ್ ಆಗಿರುವ ಈತನ ಮೇಲೆ ಕೊಲೆ, ಕೊಲೆ ಯತ್ನ, ದರೋಡೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಸೇರಿದಂತೆ 23 ಕ್ಕೂ ಹೆಚ್ಚು ಪ್ರಕರಣಗಳಿವೆ. ಅಲ್ಲದೇ ಎನ್,ಡಿ,ಪಿ,ಎಸ್ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಲಿಸ್ಟಲ್ಲಿದ್ದಾನೆ.
ಕಳೆದ ತಿಂಗಳಲ್ಲಿ ಪ್ರಕರಣವೊಂದರಲ್ಲಿ ಎಂಜಿ ರಸ್ತೆಯಲ್ಲಿ ಈತನನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿತ್ತು. ಇದೀಗ ಹೆಚ್ಚಿನ ವಿಚಾರಣೆಗಾಗಿ ತಲಘಟ್ಟಪುರ ಪೊಲೀಸರು ರೌಡಿ ರಿಜ್ವಾನ್ ನನ್ನು ವಶಕ್ಕೆ ಪಡೆದಿದ್ದಾರೆ.