ದಕ್ಷಿಣ ಆಫ್ರಿಕಾ:- ವಿದ್ಯಾರ್ಥಿ ಕೈಗೆ ಕಟ್ಟಿದ್ದ ದೇವರ ದಾರವನ್ನು ಶಾಲಾ ಶಿಕ್ಷಕ ಕತ್ತರಿಸಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ಜರುಗಿದೆ. ಇದರಿಂದ ಕೆರಳಿದ ದಕ್ಷಿಣ ಆಫ್ರಿಕಾದ ಹಿಂದೂ ಸಮುದಾಯ ಇದನ್ನು ತೀವ್ರವಾಗಿ ಖಂಡಿಸಿದೆ. ಇದೊಂದು ಸೂಕ್ಷ್ಮತೆಯಿಲ್ಲದ ಹಾಗೂ ಬೇಜವಾಬ್ದಾರಿ ಕಾರ್ಯ. ಶಿಕ್ಷಣ ಪ್ರಾಧಿಕಾರ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಶಾಲೆಯಲ್ಲಿ ಧರ್ಮವನ್ನು ಪ್ರತಿನಿಧಿಸುವ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಂಕೇತಗಳನ್ನ ಯಾವುದೇ ರೀತಿ ಧರಿಸುವಂತಿಲ್ಲ ಎಂದು ವಿದ್ಯಾರ್ಥಿಯ ಮಣಿಕಟ್ಟು ದಾರವನ್ನ ಶಿಕ್ಷಕ ಕತ್ತರಿಸಿ ಹಾಕಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಇದೊಂದು ಧಾರ್ಮಿಕ ಅಸಹಿಷ್ಣುತೆ. ಇದರ ಬಗ್ಗೆ ಸಂಪೂರ್ಣವಾಗಿ ತನಿಖೆಯಾಗಬೇಕು. ಕೂಡಲೇ ಶಿಕ್ಷಕನ ವಿರುದ್ಧ ಕ್ರಮವಾಗಬೇಕು ಎಂದು ಹಿಂದೂ ಸಮುದಾಯ ಆಗ್ರಹಿಸಿದೆ.
ಇನ್ನೂ ಶಾಲಾ ಮಂಡಳಿ ಈಗಾಗಲೇ ಈ ಬಗ್ಗೆ ತನಿಖೆಯನ್ನು ಕೈಗೊಂಡಿದೆ ಆದರೆ ಈ ದಾರವನ್ನು ಕತ್ತರಿಸಿಕೊಂಡ ವಿದ್ಯಾರ್ಥಿ ಹೇಳಿಕೆ ಕೊಡಲು ಮುಂದೆ ಬರುತ್ತಿಲ್ಲ. ಮುಂದೆ ತನಗೆ ಯಾವುದಾದರೂ ರೀತಿ ಶೈಕ್ಷಣಿಕವಾಗಿ ಸಮಸ್ಯೆಯಾಗಬಹುದು ಎಂಬ ಉದ್ದೇಶದಿಂದ ಯಾವುದೇ ಹೇಳಿಕೆ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.