ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಹೀಲಿಂಗ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇವರ ಹಾವಳಿಗೆ ಇನ್ನು ಪೊಲೀಸ್ ಇಲಾಖೆ ಬ್ರೇಕ್ ಹಾಕಿಲ್ಲ.
ಅದರಂತೆ ಪುಂಡನೋರ್ವ, ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದು, ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅದರಂತೆ ಕಾಮಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ದ 81/24 WHEELING ಪ್ರಕರಣ ದಾಖಲಾಗಿದೆ.
ಅಲ್ಲದೇ ದಸ್ತಗಿರಿ ಕ್ರಮಕ್ಕೆ ಒಳಪಡಿಸಿ ಯುವಕನ ಗಾಡಿ ಸೀಜ್ ಮಾಡಿದ್ದು, ಯುವಕನ ಡಿಎಲ್ ಅಮಾನತ್ತಿಗೆ ಪೊಲೀಸರು ವರದಿ ಕಳುಹಿಸಿದ್ದಾರೆ.



