ಬಿಡಾಡಿ ದನಗಳ ಹಾವಳಿ: ಖುದ್ದು ಫೀಲ್ಡಿಗಿಳಿದ ಎಸ್.ಪಿ ವಿಕ್ರಮ್ ಅಮಟೆ!

0
Spread the love

ಚಿಕ್ಕಮಗಳೂರು:- ರಸ್ತೆಯಲ್ಲಿ ಓಡಾಡುತ್ತಿದ್ದ ಬಿಡಾಡಿ ದನಗಳನ್ನು ಹಿಡಿದು ಪೊಲೀಸರು ಗೋಶಾಲೆಗೆ ಬಿಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ಜರುಗಿದೆ.

Advertisement

ನಗರದಲ್ಲಿ ದನಗಳ ಓಡಾಟದಿಂದ ವಾಹನಗಳ ಅಪಘಾತ ನಡೆದಿತ್ತು. ಇದರಿಂದ ಸವಾರರು ಹಾಗೂ ಸಾರ್ವಜನಿಕರು ಹೈರಾಣಾಗಿ ಹೋಗಿದ್ದರು. ಅಲ್ಲದೇ ಪೊಲೀಸರಿಗೆ ಸಾಕಷ್ಟು ಭಾರೀ ಮನವಿ ಸಲ್ಲಿಸಿದರು. ಹೀಗಾಗಿ ಇಂದು ಖುದ್ದು ಫೀಲ್ಡಿಗೆ ಎಂಟ್ರಿ ಕೊಟ್ಟ ಪೊಲೀಸರು ನಗರದ ಎಐಟಿ ಸರ್ಕಲ್ ಕೆ.ಎಂ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಬಿಟ್ಟಿದ್ದಾರೆ.

ಎಸ್.ಪಿ ವಿಕ್ರಮ್ ಅಮಟೆ ನೇತೃತ್ವದಲ್ಲಿ ನಗರದ ಎಐಟಿ ಸರ್ಕಲ್ ಕೆ.ಎಂ ರಸ್ತೆಯಲ್ಲಿ ಕಾರ್ಯಚರಣೆ ನಡೆದಿದ್ದು, ಪೊಲೀಸರ ಜೊತೆ ಅಗ್ನಿಶಾಮಕ ದಳ ಪಶುಸಂಗೋಪನೆ ಇಲಾಖೆ ಸಾಥ್ ಕೊಟ್ಟಿದ್ದಾರೆ. ಅಲ್ಲದೇ ದಂಡ ಕಟ್ಟಿ ದನಗಳನ್ನು ಬಿಡಿಸಿಕೊಂಡು ಹೋಗಲು ಮಾಲೀಕರಿಗೆ ಸೂಚನೆ ಕೊಟ್ಟಿದ್ದಾರೆ.

ಈ ವೇಳೆ ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ನೂರಾರು ಸಿಬ್ಬಂದಿ ಭಾಗಿಯಾಗಿದ್ದರು.


Spread the love

LEAVE A REPLY

Please enter your comment!
Please enter your name here