ತುಮಕೂರು:– ನಗರದ ಬನಶಂಕರಿ ಬಳಿ ಗುರಾಯಿಸಿದ್ದಾನೆಂದು ಆರೋಪಿಸಿ ಯುವಕನಿಗೆ 15 ಮಂದಿ ಯುವಕರಿದ್ದ ತಂಡ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜರುಗಿದೆ.
Advertisement
ಹಲ್ಲೆಗೊಳಗಾದ ಯುವಕನನ್ನು ಕುಶಾಲ್ ಎಂದು ಗುರುತಿಸಲಾಗಿದೆ. ಕುಶಾಲ್ ಬನಶಂಕರಿ 2 ನೇ ಹಂತದ ಮರಳೂರು ದಿಣ್ಣೆ ಬಳಿ ನಿವಾಸಿಯಾಗಿದ್ದಾನೆ. ಬನಶಂಕರಿ ಬಳಿಯಿರುವ ಬಾಬಾ ಕೆಫೆ ಬಳಿ ಟೀ ಕುಡಿಯಲು ಹೋಗಿದ್ದ ವೇಳೆ ಕುಶಾಲ್ ಮೇಲೆ ಸುಮಾರು 15 ಯುವಕರಿದ್ದ ತಂಡ ಏಕಾಏಕಿ ಹಲ್ಲೆ ನಡೆಸಿದೆ. ನವೆಂಬರ್ 21ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆಗೆ ಒಳಗಾದ ಕುಶಾಲ್ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ನಾನು ಟೀ ಕುಡಿಯುತ್ತಿದ್ದ ವೇಳೆ 15 ಜನರು ಹಲ್ಲೆ ಮಾಡಿದ್ದಾರೆ. ಏಕಾಏಕಿ ಬಂದು ಗುರಾಯಿಸುತ್ತೀಯಾ ಎಂದು 15 ಜನರ ಯುವಕರು ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.