Benefits of Peanut: ಬಡವರ ಬಾದಾಮಿ ಕಡಲೆ ಕಾಯಿಯಲ್ಲಿದೆ ಆರೋಗ್ಯದ ಗುಟ್ಟು! ಈ ಸ್ಟೋರಿ ನೋಡಿ

0
Spread the love

ನಮ್ಮಲ್ಲಿ ಹೆಚ್ಚಿನವರು ಕಡಲೆಕಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ಕಡಲೆಕಾಯಿಯನ್ನು ಬಡವರ ಬಾದಮಿ ಎಂದು ಕೂಡ ಕರೆಯುವುದುಂಟು. ಕಡಲೆಕಾಯಿಯನ್ನು ಹಸಿ, ಹುರಿದು, ಬೇಯಿಸಿ ತಿನ್ನಬಹುದು. ಹೆಚ್ಚು ರುಚಿಕೊಡುವ ಈ ಪಾದಾರ್ಥದಲ್ಲಿ ಆರೋಗ್ಯಕರ ಗುಣಗಳಿವೆ ಎಂದು ನಿಮಗೆ ತಿಳಿದಿದೆಯೇ.

Advertisement

ಹೌದು ಕಡಲೆಕಾಯಿಯಲ್ಲಿ ವಿಟಮಿನ್ ಇ, ಸೆಲೆನಿಯಮ್, ಫೈಬರ್ ಮತ್ತು ಸತು ಸಮೃದ್ಧವಾಗಿದೆ. ನಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಲು ಅಗತ್ಯವಿರುವ ಹಾರ್ಮೋನುಗಳನ್ನು ಉತ್ಪಾದಿಸಲು ಸಹ ಉಪಯುಕ್ತವಾಗಿವೆ. ರಕ್ತ ಪರಿಚಲನೆ ಹೆಚ್ಚಿಸಲು ಕಡಲೆಕಾಯಿ ಅನುಕೂಲಕರವಾಗಿದೆ.

  • ಪ್ರತಿ ದಿನ ಕಡಲೆ ಬೀಜ ತಿನ್ನುವುದರಿಂದ ಸ್ನಾಯು, ಮಾಂಸ ಖಂಡಗಳಿವೆ ಶಕ್ತಿ ಸಿಗುತ್ತದೆ. ಹೀಗಾಗಿ ನಿಯಮಿತವಾಗಿ ವ್ಯಾಯಾಮ ಮಾಡುವವರು ಹೆಚ್ಚಾಗಿ ಇದನ್ನು ತಿನ್ನುತ್ತಾರೆ.
  • ದೀರ್ಘ ಕಾಲ ಯೌವನ ಕಾಪಾಡಿಕೊಳ್ಳಲು ಕಡಲೆ ಬೀಜ ಸಹಾಯ ಮಾಡುತ್ತದೆ. ಚರ್ಮ ಸುಕ್ಕುಗಟ್ಟುವುದನ್ನು ನಿಯಂತ್ರಿಸುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
  • ಇದು ಹೃದಯವನ್ನು ಆರೋಗ್ಯವಾಗಿಡಲು ಅತ್ಯಂತ ಸಹಕಾರಿ. ಹೃದಯಾಘಾತವನ್ನು ತಡೆಯುವಲ್ಲಿ ಶೇಂಗಾ ತುಂಬಾ ಪರಿಣಾಮಕಾರಿ
  • ಇದರಲ್ಲಿ ಆರೋಗ್ಯಕರ ಕೊಬ್ಬಿನಾಂಶ ಇರುತ್ತದೆ. ತೂಕ ಹೆಚ್ಚಿಸಿಕೊಳ್ಳ ಬಯಸುವವರಿಗೆ ಪೀನಟ್​ ಬಟರ್​ ಸಹಕಾರಿ
  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ, ಜೀರ್ಣಕ್ರಿಯೆಗೂ ಸಹಕಾರಿ.
  • ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Spread the love

LEAVE A REPLY

Please enter your comment!
Please enter your name here