ಹಲಸಿನ ಹಣ್ಣು ಎಂದರೆ ಎಲ್ಲರ ಬಾಯಲ್ಲಿ ನೀರು ಬರುತ್ತೆ. ದೂರದ ಮರದಲ್ಲಿ ಬಿಟ್ಟ ಹಲಸಿನ ಹಣ್ಣು ಅದರ ಪರಿಮಳದಿಂದಲೇ ತನ್ನತ್ತ ಕೈಬೀಸಿ ಕರೆಯುತ್ತದೆ. ಈಗಂತೂ ಹಲಸಿನ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಲಾಕ್ಡೌನ್ ಜಾರಿಯಾದ ಕಾರಣ ಈ ಬಾರಿ ವ್ಯಾಪಾರ ಕಡಿಮೆಯಾಗಿದೆ ಅಷ್ಟೆ. ಯಾರಾದರೂ ಹಲಸಿನ ಹಣ್ಣು ತಿನ್ನುತ್ತಿದ್ದರೆ ಒಂದು ಎಸಳು ಕೊಡಬಾರದ ಅಂತ ಯೋಚಿಸದೇ ಇರರು..
ಹಲಸಿನ ಕಾಯಿಯ ಸಾರು ಕೂಡಾ ತುಂಬಾ ಚೆನ್ನಾಗಿ ಇರುತ್ತದೆ. ಜೊತೆಗೆ ಅದರ ಬೀಜವೂ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ ಎಂದರೆ ನೀವು ನಂಬಲೇಬೇಕು. ಅವುಗಳಿಂದಲೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಅದರ ಪ್ರಯೋಜನಗಳೇನು?
ದೇಹದಲ್ಲಿ ಕಬ್ಬಿಣಾಂಶದ ಕೊರತೆ ನೀಗಿಸುತ್ತದೆ
ಹಲಸಿನ ಹಣ್ಣಿನ ತೊಳೆಗಳು ಸೇರಿದಂತೆ ಹಲಸಿನ ಬೀಜಗಳು ಸಹ ಕಬ್ಬಿಣದ ಅಂಶವನ್ನು ಯಥೇಚ್ಛವಾಗಿ ಹೊಂದಿವೆ. ನಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ಹಿಮೋಗ್ಲೋಬಿನ್ ಎಂಬ ಅಂಶ ಇರುತ್ತದೆ. ಕಬ್ಬಿಣದ ಅಂಶ ಅದರ ಮುಖ್ಯ ಭಾಗ ಎಂದು ಹೇಳಬಹುದು. ನಮ್ಮ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾದಷ್ಟು ಕೆಂಪು ರಕ್ತ ಕಣಗಳ ಉತ್ಪತ್ತಿ ಜಾಸ್ತಿಯಾಗಿ ನಮ್ಮ ರೋಗ ನಿರೋಧಕ ವ್ಯವಸ್ಥೆ ಬಲಗೊಂಡು ನಮ್ಮನ್ನು ಹಲವಾರು ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ.
ಜೀರ್ಣ ಪ್ರಕ್ರಿಯೆ ಉತ್ತಮವಾಗುತ್ತದೆ
ಈಗಿನ ಬಹಳಷ್ಟು ಮಂದಿ ಅಜೀರ್ಣತೆ, ಗ್ಯಾಸ್ಟ್ರಿಕ್, ಮಲಬದ್ಧತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂತಹವರಿಗೆ ಹಲಸಿನ ಹಣ್ಣಿನ ಬೀಜಗಳ ಪುಡಿ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಹಲಸಿನ ಹಣ್ಣಿನ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ವಿಶೇಷವಾಗಿ ವಯಸ್ಸಾದವರಿಗೆ ತಮ್ಮ ಜೀರ್ಣ ಕ್ರಿಯೆಯಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಬೇಧಿ ಸಮಸ್ಯೆಯನ್ನು ಎದುರಿಸುತ್ತಿರುವವರು ಹಲಸಿನ ಬೀಜಗಳನ್ನು ಬೇಯಿಸಿ ತಿನ್ನಬಹುದು.
ಕಣ್ಣಿನ ದೃಷ್ಟಿ ವೃದ್ಧಿಸುತ್ತದೆ
ನಮ್ಮ ಪ್ರಪಂಚ ಡಿಜಿಟಲ್ ತಂತ್ರಜ್ಞಾನದ ಮೇಲೆ ತನ್ನ ಹಲವಾರು ಕೆಲಸಗಳನ್ನು ಸಾಧಿಸಿಕೊಳ್ಳುತ್ತದೆ. ಹಾಗಾಗಿ ಪ್ರತಿಯೊಬ್ಬರು ಕಂಪ್ಯೂಟರ್ ಹಾಗೂ ಸ್ಮಾರ್ಟ್ಫೋನ್ ಮೇಲೆ ಇಂದು ಅವಲಂಬಿತರಾಗಿದ್ದಾರೆ.ಹಲಸಿನ ಬೀಜಗಳು ಪರಿಹಾರ ಒದಗಿಸಬಲ್ಲವು. ಅಂದರೆ ಹಲಸಿನ ಬೀಜದಲ್ಲಿ ವಿಟಮಿನ್ ‘ ಎ ‘ ಅಂಶ ಹೆಚ್ಚಾಗಿದ್ದು, ರಾತ್ರಿ ಕುರುಡು ಸಮಸ್ಯೆಯನ್ನು ಅನುಭವಿಸುತ್ತಿರುವವರಿಗೆ ಇದು ಒಳ್ಳೆಯ ಪರಿಹಾರ. ವಯಸ್ಸಾಗುತ್ತಿದ್ದಂತೆ ಉಂಟಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಸಹ ಇದು ನಿವಾರಣೆ ಮಾಡುತ್ತದೆ.
ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ
ಹಲಸಿನ ಹಣ್ಣಿನ ಬೀಜಗಳಲ್ಲಿ ಮ್ಯಾಂಗನೀಸ್ ಅಂಶ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಮ್ಯಾಂಗನೀಸ್ ಅಂಶ ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಕೆಲಸ ಮಾಡುತ್ತದೆ.
ಹಾಗಾಗಿ ಹಲಸಿನ ಹಣ್ಣಿನ ಬೀಜಗಳನ್ನು ನಿತ್ಯ ನಿಯಮಿತವಾಗಿ ಸೇವಿಸುತ್ತಿದ್ದರೆ ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಕಡಿಮೆಯಾಗಿ, ರಕ್ತ ಸಂಚಾರ ಸುಗಮವಾಗಿ ಹಾರ್ಟ್ ಅಟ್ಯಾಕ್ ಅಂತಹ ಸಮಸ್ಯೆಗಳು ಇಲ್ಲವಾಗುತ್ತವೆ.
ಲೈಂಗಿಕ ಆಸಕ್ತಿಯನ್ನು ಹೆಚ್ಚು ಮಾಡುತ್ತದೆ
ಹಲವು ಸಂಗಾತಿಗಳು ಸಮಯದ ಅಭಾವದಿಂದ ಹಾಗೂ ತಮ್ಮ ದುಡಿಮೆಯ ಒತ್ತಡದಿಂದ ಒಬ್ಬರ ನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು ಸಂಸಾರ ನಡೆಸಲು ಸಾಧ್ಯವಾಗಿರುವುದಿಲ್ಲ. ಇಬ್ಬರ ಮಧ್ಯೆ ಏನೂ ನಡೆದೇ ಇಲ್ಲ ಎಂಬಂತೆ ಇರುತ್ತಾರೆ.
ಇದಕ್ಕೆ ಲೈಂಗಿಕ ಆಸಕ್ತಿಯ ಕೊರತೆ ಕೂಡ ಕಾರಣವಾಗಿರಬಹುದು. ಅಂತಹವರಿಗೆ ಹಲಸಿನ ಹಣ್ಣಿನ ಬೀಜಗಳು ಸಹಾಯ ಮಾಡುತ್ತವೆ ಎಂದು ಹೇಳಬಹುದು.ಹಲಸಿನ ಹಣ್ಣಿನ ಬೀಜಗಳಲ್ಲಿ ಕಂಡು ಬರುವ ಕಬ್ಬಿಣದ ಅಂಶ ಸಂಗಾತಿಗಳಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚು ಮಾಡುತ್ತದೆ.
ಮಾಂಸ – ಖಂಡಗಳು ಬಲಗೊಳ್ಳುತ್ತವೆ
ತಮ್ಮ ದೇಹದ ಸದೃಢತೆಯನ್ನು ಹೆಚ್ಚು ಮಾಡಿಕೊಳ್ಳಬೇಕೆಂಬ ಆಸಕ್ತಿ ಹೊಂದಿರುವ ವ್ಯಕ್ತಿಗಳು ತಮ್ಮ ಆಹಾರ ಸೇವನೆಗೆ ಪೂರ್ವಕವಾಗಿ ಹಲಸಿನ ಹಣ್ಣಿನ ಬೀಜಗಳನ್ನು ಸೇವಿಸಬಹುದು. ಏಕೆಂದರೆ ಹಲಸಿನ ಹಣ್ಣಿನ ಬೀಜಗಳಲ್ಲಿ ಪ್ರೋಟೀನ್ ಅಂಶ ಸಾಕಷ್ಟಿದೆ.