ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಯೋಧರು ವೀರರು. ದೇಶವನ್ನು ಸಂರಕ್ಷಿಸುವ, ಕಟ್ಟುವ ಕಾರ್ಯದಲ್ಲಿ ತೊಡಗಿದವರು. ಮಳೆ, ಗಾಳಿ, ಬಿಸಿಲು, ಛಳಿ ಯಾವುದನ್ನೂ ಲೆಕ್ಕಿಸದೇ ದೇಶವನ್ನು ಕಾಯುವ ಕಾಯಕದಲ್ಲಿ ನಿರತರಾಗಿರುವ ಇವರ ಸೇವೆ ಸದಾ ಸ್ಮರಣೀಯ ಎಂದು ಜಿಲ್ಲಾ ಮಾಜಿ ಸೈನಿಕರ ಸಂಘದ ಸಂಚಾಲಕ, ನ್ಯಾಯವಾದಿ ಸುಧೀರಸಿಂಹ ಘೋರ್ಪಡೆ ಹೇಳಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘ, ಮಾಜಿ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘ, ವೀರನಾರಿಯರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 26ನೇ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾತನಾಡುತ್ತಿದ್ದರು.
ಭಾರತೀಯ ಸೈನಿಕರು ವೀರರೂ, ಶೂರರೂ ಆಗಿದ್ದು, ಅವರೆಲ್ಲರಿಗೂ ನಾವು ಬೆಂಬಲದೊAದಿಗೆ ಧೈರ್ಯ ತುಂಬುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರಲ್ಲದೆ, ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಯೋಧರಿಗೆ ನಮನ ಸಲ್ಲಿಸಿದರು.
ಕಾರ್ಗಿಲ್ ಯುದ್ಧದ ಘಟನಾವಳಿಗಳನ್ನು ಎಸ್.ಎಸ್. ಪೆಂಟಾ ವಿವರಿಸಿದರು. ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೂಳಯ್ಯ ಮಾಲಗಿತ್ತಿಮಠ ಸಾಂದರ್ಭಿಕವಾಗಿ ಮಾತನಾಡಿದರು. ಹುತಾತ್ಮ ಯೋಧರ ಗೌರವಾರ್ಥವಾಗಿ ಮೌನ ಆಚರಿಸಲಾಯಿತು.
ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಕಾರ್ಯದರ್ಶಿ ಸಿ.ಜಿ. ಸೊನ್ನದ, ಸಹ ಕಾರ್ಯದರ್ಶಿ ಮಹೇಶ ಆಶಿ, ಸಂಘಟನಾ ಕಾರ್ಯದರ್ಶಿ ಈರಣ್ಣ ತಳ್ಳಿಕೇರಿ, ನಿರ್ದೇಶಕರಾದ ವಿ.ಬಿ. ಬಿಂಗಿ, ಶರಣಪ್ಪ ಸರ್ವಿ, ಕೆ.ಎಸ್. ಹಿರೇಮಠ, ಜಿ.ಬಿ. ಅರವಟಗಿಮಠ, ಎ.ಎಂ. ತಹಸೀಲ್ದಾರ್, ಯಲ್ಲಪ್ಪಗೌಡ ಹುಲ್ಲೂರ, ಶಂಕರಗೌಡ ಪಾಟೀಲ, ಶರೀಫ ಹಿರೇಹಾಳ, ಮಮ್ಮದ್‌ಹನೀಫ್ ಶೇಕ್‌ಬಾಯಿ, ಬಸನಗೌಡ ಪಾಟೀಲ, ಶಂಕರ ಹಾದಿಮನಿ, ಎಸ್.ಎಸ್. ಪಾಟೀಲ, ಎಂ.ಎಸ್. ಗುಜ್ಜಲ, ಎನ್.ಎಚ್. ಕಂಬಳಿ, ವೀರಯ್ಯ ಮಾಲಗಿತ್ತಿಮಠ, ಶಂಕ್ರಪ್ಪ ಹೆಬ್ಬಳ್ಳಿ, ಸೈಯದ್ ಎಂ.ಹುಕ್, ಮೆಹಬೂಬ ತೆಕ್ಕೆದ, ನಾಗಯ್ಯ ಸಾವಳಗಿಮಠ, ವಾಸಪ್ಪ ಶೆಟವಾಜಿ, ವೀರನಾರಿಯರಾದ ಶಿವಲೀಲಾ ಬಾವಿಕಟ್ಟಿ, ಲಲಿತಾ ಕುರಹಟ್ಟಿ, ರೇಣುಕಾ ಮರಡಿ, ಮೀನಾಕ್ಷಿ ಬದಿ, ಶಾಂತದೇವಿ ಸಾವಳಗಿಮಠ, ಹಾಲಿ ಮತ್ತು ಮಾಜಿ ಪ್ಯಾರಾ ಮಿಲಿಟರಿ ಯೋದರ ಸಂಘದ ಗದಗ ಜಿಲ್ಲಾ ಗೌರವಾಧ್ಯಕ್ಷ ವಿ.ಎಸ್. ಅಕ್ಕಿ, ಅಧ್ಯಕ್ಷ ನಾಗರಾಜ ಕುಂದರಗಿ, ಸುರೇಶ್ ಮುಂಡವಾಡ, ಉಮೇಶ ಕರಿಗಣ್ಣವರ, ಮಲ್ಲಿಕಾರ್ಜುನ ಮೇವುಂಡಿ, ಬಸಯ್ಯ ಹಿರೇಮಠ, ಮಹಾಂತೇಶ್ ಲಕ್ಕುಂಡಿ, ಮಲ್ಲಯ್ಯ ಕರವೀರಮಠ, ಗೌಸ್‌ಮೋಹದಿನ ನದಾಫ್, ರವಿ ಕುಲಕರ್ಣಿ, ಮುತ್ತಣ್ಣ ಸಿಂಗಟಾಲಕೆರೆ, ಈಶ್ವರಪ್ಪ ಕರ್ಕಿಕಟ್ಟಿ, ಸುಭಾಷ ಹಾದಿಮನಿ, ಸೋಮನಗೌಡ ಪಾಟೀಲ, ಅಶೋಕ ನಾಯಕ, ಯಲ್ಲಪ್ಪ ಬೆನಕೊಪ್ಪ, ರಾಮಪ್ಪ ನೀರಲಗಿ, ಕರುಣಾಕರಣ, ಅಣ್ಣಪ್ಪ ಗಾಣಿಗೇರ ಸೇರಿದಂತೆ ಸೈನಿಕರು, ಬೆಟಗೇರಿ ಶರಣಬಸವೇಶ್ವರ ಪ್ರೌಢಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಯ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
ಹಾಲಿ ಮತ್ತು ಮಾಜಿ ಪ್ಯಾರಾ ಮಿಲಿಟರಿ ಯೋಧರ ಸಂಘದ ಅಧ್ಯಕ್ಷ ನಾಗರಾಜ ಕುಂದರಗಿ ಮಾತನಾಡಿ, ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶ ರಕ್ಷಣೆ, ಗಡಿ ಕಾಯುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡವರು. ಕಾರ್ಗಿಲ್ ವಿಜಯೋತ್ಸವ ಹಾಗೂ ದೇಶಕ್ಕಾಗಿ ತಮ್ಮ ಪ್ರಾಣ ನೀಡಿದ ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸುವ ಕಾರ್ಯ ಸರ್ಕಾರ, ಜಿಲ್ಲಾಡಳಿತದಿಂದ ಆಗಬೇಕು. ಆದರೆ ಮಾಜಿ ಸೈನಿಕರ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿ ಅಧಿಕಾರಿಗಳನ್ನು ಆಮಂತ್ರಿಸುವದು ಎಷ್ಟು ಸಮಂಜಸ ಎಂದರು.