ಹಾಸನದಲ್ಲಿ ಮುಂದುವರಿದ ಸಾವಿನ ಸೂತಕದ ಛಾಯೆ: ಹೃದಯಾಘಾತಕ್ಕೆ ಸೈನಿಕ ಬಲಿ..!

0
Spread the love

ಹಾಸನ: ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಬರುತ್ತಿದ್ದ ಹೃದಯಾಘಾತ ಈಗ ಯುವಕರನ್ನು ಸಹ ಬಲಿಪಶುಗಳನ್ನಾಗಿ ಮಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಯುವ ಜನರ ಸಾವಿನ ಸರಣಿ ಮುಂದುವರಿದಿದೆ. ಅದರಲ್ಲೂ ಹಾಸನ ಜಿಲ್ಲೆಯ ಯುವಕ-ಯುವತಿಯರು ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು,

Advertisement

ಇದೀಗ ಹೃದಯಾಘಾತಕ್ಕೆ ಸೈನಿಕನೋರ್ವ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದಲ್ಲಿ ನಡೆದಿದೆ. ಲೋಹಿತ್ (38) ಮೃತಪಟ್ಟ ಸೈನಿಕನಾಗಿದ್ದು, ಕಳೆದ 18 ವರ್ಷಗಳಿಂದ ಸೈನಿಕರಾಗಿ ದೇಶಸೇವೆ ಮಾಡಿದ್ದರು.

ಕಳೆದ 7 ವರ್ಷದ ಹಿಂದೆ ಮದುವೆಯಾಗಿದ್ದು, 3 ವರ್ಷದ ಹೆಣ್ಣು ಮಗಳಿದ್ದಾಳೆ. ಯೋಧ ಲೋಹಿತ್ ಅವರು​ ಜುಲೈ 03ರಂದು ವಾಪಸ್ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಹಾಗಾಗಿ ಜು.3ರಂದು ರೈಲಿನಲ್ಲಿ ಹೊರಡಲು ಟಿಕೆಟ್ ಕೂಡಾ ಬುಕ್ ಮಾಡಿದ್ದರು. ಆದ್ರೆ ವಿಧಿಯಾಟ ಬೇರೆಯಾಗಿತ್ತು.  ಕುಟುಂಬದಲ್ಲಿ ಸಾವಿನಿಂದ ದುಃಖ ಮಡುಗಟ್ಟಿದೆ.


Spread the love

LEAVE A REPLY

Please enter your comment!
Please enter your name here