ಗದಗ:- ಆಸ್ತಿಗಾಗಿ ಸಹೋದರನನ್ನೇ ನಡು ರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಕಿರಾತಕರು ಪರಾರಿ ಆಗಿರುವ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಜರುಗಿದೆ.
60 ವರ್ಷದ ಕಾಶಿಮಸಾಬ್ ಗಫಾರಸಾಬ ಹಮಸಾಗರ ಕೊಲೆಯಾದ ದುರ್ಧೈವಿ. ಬೈಕ್ ಅಡ್ಡಗಟ್ಟಿ ಐವರು ಆರೋಪಿಗಳಿಂದ ದಾಳಿ ನಡೆದಿದೆ. ಆರೋಪಿಗಳಲ್ಲಿ ಇಬ್ಬರು ಮೃತನ ಸಹೋದರರು, ಇಬ್ಬರು ಸಹೋದರನ ಮಕ್ಕಳು ಹಾಗೂ ಅಳಿಯ ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿ ಕಾಶಿಮಸಾಬ ಪ್ರಾಣ ಬಿಟ್ಟಿದ್ದಾನೆ. ಇನ್ನೂ ಕೊಲೆ ನೋಡಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಸಹೋದರರಾದ ಖಾಜಾಹುಸೇನ ಗಫಾರಸಾಬ ಹಮಸಾಗರ, ಶೌಕತ್‌ಅಲಿ ಗಫಾರಸಾಬ ಹಮಸಾಗರ, ಮಕ್ಕಳಾದ ಜಾವೇದ್ ಶೌಕತ್‌ಅಲಿ ಹಮಸಾಗರ, ಸಮೀರ್ ಖಾಜಾಹುಸೇನ ಹಮಸಾಗರ ಹಾಗೂ ಅಳಿಯ ಬಾಸುಸಾಬ ಅಕಬರಸಾಬ ಬೆಳವಗಿ ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ.
ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.