ತುಮಕೂರು:- ಇಲ್ಲಿನ ಕುಣಿಗಲ್ ಪೊಲೀಸರು ತನಿಖೆ ಚುರುಕುಗೊಳಿಸಿ ಹೆತ್ತಪ್ಪನನ್ನೇ ಕೊಲೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ಪಾಪಿ ಮಗನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸೂರ್ಯ ಬಂಧಿತ ಪಾಪಿ ಮಗ. ನಾಗೇಶ್ ಕೊಲೆಯಾದ ದುರ್ದೈವಿ ತಂದೆ. ಸಿಸಿಟಿವಿ ಪರಿಶೀಲನೆ ವೇಳೆ ಮಗನ ಕೃತ್ಯ ಬಟಾಬಯಲಾಗಿದೆ.
ಎಸ್, ಮೇ.11 ರಂದು ಕುಣಿಗಲ್ ನ ಅಪೋಲೋ ಐಸ್ ಕ್ರೀಂ ಫ್ಯಾಕ್ಟರಿಯಲ್ಲಿ ನಾಗೇಶ್(55) ಮೃತದೇಹ ಪತ್ತೆಯಾಗಿತ್ತು. ಬೆರಳಿಗೆ ಕರೆಂಟ್ ಶಾಕ್ ಹೊಡೆದು ಸತ್ತ ರೀತಿಯಲ್ಲಿ ನಾಗೇಶ್ ಶವ ಪತ್ತೆಯಾಗಿತ್ತು. ಅಲ್ಲದೇ ಸಹಜ ಸಾವು ಎಂದು ಎಲ್ಲಾ ಅಂತ್ಯ ಕ್ರಿಯೆ ಮುಗಿಸಲಾಗಿತ್ತು. ಆದರೆ ಸಹೋದರಿ ಸವಿತ ಈ ಬಗ್ಗೆ ಕೊಂಚ ಅನುಮಾನದಿಂದ ಪೊಲೀಸರಿಗೆ ದೂರು ಕೊಟ್ಟಿದ್ದರು. ಅಲ್ಲದೇ ಸಿಸಿಟಿವಿ ಪರಿಶೀಲನೆ ಮಾಡುವಂತೆ ಹೇಳಿದರು. ಈ ವೇಳೆ ತನಿಖೆ ಕೈಗೊಂಡ ಪೊಲೀಸರು, ಐಸ್ ಕ್ರೀಂ ಫ್ಯಾಕ್ಟರಿಯಲ್ಲಿದ್ದ ಸಿಸಿ ಕ್ಯಾಮೆರಾದ ಡಿವಿಆರ್ ವಶಪಡಿಸಿಕೊಂಡಿದ್ದರು. ಈ ವೇಳೆ ತಂದೆ ನಾಗೇಶ್ ನನ್ನು ಪುತ್ರ ಸೂರ್ಯ ಕೊಲೆ ಮಾಡುತ್ತಿರುವ ಎಲ್ಲಾ ದೃಶ್ಯಗಳು ಸೆರೆಯಾಗಿದೆ.
ಬಳಿಕ ಪಾಪಿ ಮಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ತನಿಖೆ ಕೈಗೊಂಡಿದ್ದಾರೆ.