ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆ ಮತ್ತು ಸಾಹಿತ್ಯದಲ್ಲಿ ಉತ್ತರ ಕರ್ನಾಟಕದ ಸೊಗಡೇ ಬೇರೆ. ಅದು ಬಹಳ ವಿಶಿಷ್ಟ ಮತ್ತು ವಿಭಿನ್ನ ಎಂದು ಟಿವಿ ನಿರೂಪಕ, ನಟ, ಹಾಸ್ಯ ಕಲಾವಿದ ಅಕುಲ್ ಬಾಲಾಜಿ ಅಭಿಪ್ರಾಯಪಟ್ಟರು.
ಗದುಗಿನ ಉದಯೋನ್ಮುಖ ಪ್ರತಿಭೆ ನಿಂಗು ಹುಣಸಿಮರದ್ ಇವರ ಫೋನ್ ಮಾಡ್ವಲ್ಲಿ’ ಆಲ್ಬಮ್ ಸಾಂಗ್‌ನ್ನು ಆನ್‌ಲೈನ್ ಮೂಲಕ ವೀರ ಸಂಗೊಳ್ಳಿ ರಾಯಣ್ಣನರ ವೀರ ಭೂಮಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಹೊಂದಿದ್ದು, ಚಲನಚಿತ್ರ ಶೈಲಿಯಲ್ಲಿ ಚಿತ್ರೀಕರಿಸಲಾಗಿದೆ. ಉತ್ತರ ಕರ್ನಾಟಕದ ಜನತೆಗೆ ಇದು ಇಷ್ಟವಾಗುತ್ತದೆ ಎಂದರು. ಗದುಗಿನ ನೀ ಕ್ರಿಯೇಷನ್’ ಸಾರಥ್ಯದಲ್ಲಿ ನಿರ್ಮಾಣಗೊಂಡ ಯುವ ಕಲಾವಿದ ನಿಂಗೂ ಹುಣಸಿಮರದ ಅವರೇ ರಚಿಸಿ, ಹಾಡಿ, ಅಭಿನಯಿಸಿರುವ ಪ್ರಥಮ ಈ ಆಲ್ಬಮ್ ಸಾಂಗ್ ನ್ನು ಸಂಗೊಳ್ಳಿಯಲ್ಲಿ ಬಿಡುಗಡೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಸಂಗೀತ ಸಂಯೋಜಕ ವಿನೋದ್ ಹಿರೇಮಠ, ಕಲಾ ಪ್ರೋತ್ಸಾಹಕರಾದ ವಿಜಯಕುಮಾರ ಹಿರೇಮಠ, ನಟರಂಗ ಸಂಸ್ಥೆಯ ಸಂಸ್ಥಾಪಕ ಸೋಮಶೇಖರ ಚಿಕ್ಕಮಠ, ಬಣ್ಣದಮನೆ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ವಿಜಯ ಕಿರೇಸೂರ, ಭರತ ರಾಯಬಾಗಿ, ಆಲ್ಬಮ್ನ ನಟಿ ಸುಪ್ರಿಯಾ ರಾಯ್ಕರ ಸೇರಿದಂತೆ ಮುಂತಾದ ಕಲಾವಿದರು ಇದ್ದರು.



