ಮಂಗಳೂರು: ನಮ್ಮ ಮೇಲೆ ಬಂದಿರುವಂತಹ ಅಪವಾದಗಳು ಓಡಿ ಹೋಗುತ್ತವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಜನ ಸೇನಾ ದೀಪಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಮೇಲೆ ಬಂದಿರುವಂತಹ ಅಪವಾದಗಳು ಓಡಿ ಹೋಗುತ್ತವೆ.
ಈ ದೀಪಾರಾಧನೆಯಿಂದ ಕ್ಷೇತ್ರದ ಅಪಾಯ ದೂರವಾಗುತ್ತದೆ. ನಾನು ಮಾತನಾಡಬಾರದು ಎಂದು ಕಾನೂನು ಇದೆ. ಹಾಗಾಗಿ, ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.
ಇನ್ನೂ ನಿಮ್ಮ ಭಕ್ತಿ ವಿಶೇಷವಾದದ್ದು. ಬಡತನ ಹೋಗಲಾಡಿಸಬೇಕೆಂಬುದು ನಮ್ಮ ಗುರಿ. ಗ್ರಾಮೀಣ ಅಭಿವೃದ್ಧಿಯಿಂದ ಮಹಿಳೆಯರಿಗೆ ಶಕ್ತಿ ನೀಡಬೇಕು. ಹಿಂದೂ ಧರ್ಮ ಸನಾತನ ಧರ್ಮ ಉಳಿಯಲಿ ಎಂದು ಆಶಯ ವ್ಯಕ್ತಪಡಿಸಿದರು.



