ಹಾವೇರಿ:- ಪತ್ನಿಯನ್ನ ಮನೆಗೆ ಕಳುಹಿಸದ್ದಕ್ಕೆ ಮಾವನ ಮೇಲೆ ಸಿಟ್ಟಾದ ಅಳಿಯನೋರ್ವ ಮಾವನ ಅಡಕೆ ತೋಟ ನಾಶಪಡಿಸಿದ ಘಟನೆ ಜರುಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಸಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, 106 ಅಡಿಕೆ ಗಿಡಗಳನ್ನ ಅಳಿಯ ಕಡಿದು ಹಾಕಿದ್ದಾನೆ. ದೇವೆಂದ್ರಪ್ಪ ಫಕ್ಕಿರಪ್ಪ ಗಾಣಿಗೇರಗೆ ಸೇರಿದ ಅಡಿಕೆ ತೋಟ ಇದಾಗಿದ್ದು, ಅಳಿಯ ಬಸವರಾಜ್ ನಿಂದ ಅಡಿಕೆ ಬೆಳೆ ನಾಶ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದ ಬಸವರಾಜ್, ಹತ್ತು ವರ್ಷಗಳ ಹಿಂದೆ ದೇವೆಂದ್ರಪ್ಪ ಫಕ್ಕಿರಪ್ಪ ಗಾಣಿಗೇರ ಅವರ ಮಗಳನ್ನು ಮದುವೆ ಆಗಿದ್ದ. ಬಳಿಕ ನಿತ್ಯ ಹೆಂಡತಿ ಜೊತೆ ಜಗಳ ಮಾಡುತ್ತಿದ್ದ. ಹೀಗಾಗಿ ಗಂಡನ ಕಿರುಕುಳಕ್ಕೆ ಬೆಸತ್ತು ಹೆಂಡತಿ ತವರು ಮನೆ ಸೇರಿದ್ದಳು. ಅಲ್ಲದೇ ಮೂರು ತಿಂಗಳಿನಿಂದ ಹೆಂಡತಿ ತವರು ಮನೆಯಲ್ಲೇ ಇದ್ದಳು. ಇದೀಗಪತಿ ಪತ್ನಿ ನಡುವೆ ಜಗಳಕ್ಕೆ ಅಡಕೆ ಗಿಡಗಳು ಬಲಿಯಾಗಿದ್ದು ಮಾತ್ರ ದುರ್ದೈವ. ಘಟನೆ ಸಂಬಂಧ ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.