HomeKarnataka Newsಅನಧಿಕೃತ ಎಲ್​​ಕೆಜಿ, ಯುಕೆಜಿ ಶಾಲೆಗಳ ವಿರುದ್ಧ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ!

ಅನಧಿಕೃತ ಎಲ್​​ಕೆಜಿ, ಯುಕೆಜಿ ಶಾಲೆಗಳ ವಿರುದ್ಧ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ!

For Dai;y Updates Join Our whatsapp Group

Spread the love

ಬೆಂಗಳೂರು:– ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ಹಾವಳಿ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಅನಧಿಕೃತ ಎಲ್​​ಕೆಜಿ, ಯುಕೆಜಿ ಪ್ರೀ ನರ್ಸರಿ ಶಾಲೆಗಳು ಪೋಷಕರ ವಂಚನೆಗೆ ಮುಂದಾಗಿದ್ದು ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಾಟಿ ಬೀಸಿದೆ.

ಪೋಷಕರಿಂದ ಲಕ್ಷ ಲಕ್ಷ ಸುಲಿಗೆಗೆ ಮುಂದಾಗಿದ್ದು, ಎಗ್ಗಿಲ್ಲದೆ ಎಲ್ಲೆಂದರಲ್ಲಿ ಅಕ್ರಮ ಎಸಗಲಾಗುತ್ತಿದೆ. ಯಾವುದೇ ಇಲಾಖೆಯ ಅನುಮತಿ ಇಲ್ಲದೆಯೇ, ಮಾನದಂಡಗಳನ್ನು ಪಾಲಿಸದೆಯೇ ಶಾಲೆಗಳ ಆರಂಭವಾಗುತ್ತಿವೆ.

ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಇವುಗಳಿಗೆ ಯಾವುದೇ ಕಠಿಣವಾದ ಮಾರ್ಗಸೂಚಿಗಳಿಲ್ಲ. ಪೂರ್ವ ಪ್ರಾಥಮಿಕ ಶಾಲೆಗಳ ನೊಂದಣಿ ಕಡ್ಡಾಯ ಮಾಡಿರುವುದು ಬಿಟ್ಟರೆ ಯಾವುದೇ ಮಾನದಂಡ ಇಲ್ಲ. ಇದೀಗ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ತಲೆ ಎತ್ತಿರುವ ಅನಧಿಕೃತ ನರ್ಸರಿ ಶಾಲೆಗಳ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮಕ್ಕೆ ಮುಂದಾಗಿದೆ.

2018 ಶಿಕ್ಷಣ ಕಾಯ್ದೆಯ ಪ್ರಕಾರ, ನರ್ಸಿರಿ ಶಾಲೆಗಳ ನೊಂದಣಿ ಕಡ್ಡಾಯ. ಆದರೆ ಶಿಕ್ಷಣ ಇಲಾಖೆಯ STATS ನಲ್ಲಿ ಈ ನರ್ಸರಿ ಶಾಲೆಗಳು ರಿಜಿಸ್ಟರ್ ಮಾಡಿಸುವುದಿಲ್ಲ. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ನರ್ಸಿರಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಆದರೆ ನೊಂದಣಿಯಾಗುತ್ತಿಲ್ಲ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಜೊತೆ ಮಾತುಕತೆಗೆ ಮುಂದಾಗಿದ್ದು, ಅನಧಿಕೃತವಾಗಿ ತಲೆ ಎತ್ತಿರುವ ಪೂರ್ವ ಪ್ರಾಥಮಿಕ ಶಾಲೆಗಳ ವರದಿ ಪಡೆಯಲು ಮುಂದಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!