ಬೆಂಗಳೂರು: ಹಳದಿ ಮಾರ್ಗಕ್ಕೆ ರಾಜ್ಯದ್ದೇ ಪಾಲು ಹೆಚ್ಚು. 80% ಅನುದಾನವನ್ನು ನಾವು ಕೊಟ್ಟಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇಂದು ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆಯ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,
Advertisement
ಬಿಜೆಪಿ ಸಂಸದರಿಗೆ ನಾಚಿಕೆಯಾಗಬೇಕು.ಒಬ್ಬನೇ ಒಬ್ಬ ಬಿಜೆಪಿ ಎಂಪಿ 10 ರೂಪಾಯಿ ಅನುದಾನ ಕೊಡಿಸಿಲ್ಲ. ಬಿಜೆಪಿ ಅವರ ಸಾಧನೆ ಏನಿಲ್ಲ ಎಂದು ಹೇಳಿದರು.
ಹಳದಿ ಮಾರ್ಗಕ್ಕೆ ರಾಜ್ಯದ್ದೇ ಪಾಲು ಹೆಚ್ಚು. 80% ಅನುದಾನವನ್ನು ನಾವು ಕೊಟ್ಟಿದ್ದೇವೆ. ಬಿಜೆಪಿಯವರು ನಾವೇ ಮೆಟ್ರೋ ಮಾಡಿದ್ದಾರೆ ಎಂದು ಶೋ ಮಾಡುತ್ತಿದ್ದಾರೆ. ನಮ್ಮ ಮೆಟ್ರೋ ಯೋಜನೆಗೆ ನಾವು 80% ಅನುದಾನ ನೀಡಿದರೆ ಕೇಂದ್ರ ಸರ್ಕಾರ 20% ಅನುದಾನ ನೀಡಿದೆ. ನಿಜವಾಗಿ ಅವರು 50% ಅನುದಾನ ನೀಡಬೇಕಿತ್ತು ಸಿಟ್ಟು ಹೊರಹಾಕಿದರು.