ಚಿತ್ರದುರ್ಗ: ಐತಿಹಾಸಿಕ ಮುರುಘಾ ಮಠದ ರಾಜಾಂಗಣದಿಂದ ಕಳ್ಳತನವಾಗಿದ್ದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ವಿಗ್ರಹ ಮಠದ ಆವರಣದಲ್ಲಿ ದಿಢೀರ್ ಪ್ರತ್ಯಕ್ಷವಾಗಿದೆ.
ಈ ನಡುವೆ ನಾಲ್ವರು ಶಂಕಿತ ಆರೋಪಿಗಳ ಮೇಲೆ ಪೊಲೀಸರ ಕಣ್ಣು ಬಿದ್ದಿದೆ. ಬೆಳ್ಳಿ ಕದ್ದವರು ಯಾರು, ವಾಪಸ್ ತಂದವರು ಯಾರು? ಎಂಬ ಪ್ರಶ್ನೆ ಮೂಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ
ಇನ್ನು ಕಳ್ಳರಿಗೋಸ್ಕರ ತೀವ್ರ ತಲೆಕೆಡಿಸಿಕೊಂಡಿದ್ದ ಪೊಲೀಸರು, ಇದೀಗ ಮಠದ ನೌಕರರಾದ ಗೋಪಿ, ಬಸನಗೌಡ, ರೆಡ್ಡಿ ಹಾಗೂ ಮಹಾಲಿಂಗ ಎಂಬ ನಾಲ್ವರು ಮೇಲೆ ಶಂಕೆ ವ್ಯಕ್ತಪಡಿಸಿದ ಪೊಲೀಸರು, ಕೋರ್ಟ್ ಅನುಮತಿ ಪಡೆದು ನಾಲ್ವರನ್ನು ಪಾಲಿಗ್ರಫಿ ಪರೀಕ್ಷೆಗೆ ಒಳಪಡಿಸಲು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಮಠದ ಈ ನಾಲ್ವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ. ಜೂನ್ 26ರಂದು ಬಸನಗೌಡ ಸಿಸಿಟಿವಿ ಆಫ್ ಮಾಡಿದ್ದ. ನಂತರ ಜುಲೈ 10 ರಂದು ಮಹಾಲಿಂಗ ಎಂಬಾತ ಸಿಸಿಟಿವಿ ಆನ್ ಮಾಡಲು ಯತ್ನಿಸಿದ್ದ. ಹೀಗಾಗಿ ಬಸನಗೌಡ, ಮಹಾಲಿಂಗ, ಗೋಪಿ, ರೆಡ್ಡಿ ಚಲನವಲನ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ಪಾಲಿಗ್ರಫಿ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.