ಹಾಸ್ಟೆಲ್​ನಲ್ಲಿ ರಾತ್ರಿ ಬಾತ್​ರೂಂಗೆ ಹೋದ ವಿದ್ಯಾರ್ಥಿ ನೇಣಿಗೆ ಶರಣು!

0
Spread the love

ಉಡುಪಿ:- ಹಾಸ್ಟೆಲ್​ನಲ್ಲಿ ರಾತ್ರಿ ಬಾತ್​ರೂಂಗೆ ಹೋದ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದು, ಸಾವಿನ ಬಗ್ಗೆ ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ.

Advertisement

ಮೃತ ಯುವಕನನ್ನು ಮಹಮ್ಮದ್ ಜಹೀದ್ ಎಂದು ತಿಳಿದು ಬಂದಿದೆ. ಸದ್ಯ ಮಗನ ಸಾವಿನ ಕುರಿತು ತಾಯಿ ರಿಹಾನ ಬೇಗಂ ಸಂಶಯ ವ್ಯಕ್ತಪಡಿಸಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಮೃತ ಮಹಮ್ಮದ್ ಜಹೀದ್​​ ಕಳೆದ ನಾಲ್ಕು ತಿಂಗಳಿಂದ ಮದರಸ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದ. ಹೇರಾಡಿ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ.

ರಜೆಯಲ್ಲಿ ಮನೆಗೆ ತೆರಳಿದ್ದ ಜಹೀದ್ ರಜೆ ಮುಗಿಸಿ ಹಾಸ್ಟೆಲ್​ ಮರಳಿದ್ದ. ರಾತ್ರಿ ವೇಳೆ ಮದರಸ ಹಾಸ್ಟೆಲ್ ಬಾತ್ರೂಮಿನಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here