ಹಾವೇರಿ: ಸಮೀಕ್ಷೆ ಸದುದ್ದೇಶದಿಂದ ಕೂಡಿಲ್ಲ, ರಾಜಕೀಯ ಉದ್ದೇಶದಿಂದ ಕೂಡಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ಮೂಲಕ ಸಮಾಜ ಒಡೆಯೋದಲ್ಲ, ಸಮಾಜವನ್ನು ಚೂರು ಚೂರು ಮಾಡಿದ್ದಾರೆ. ಇದು ಸದುದ್ದೇಶದಿಂದ ಕೂಡಿಲ್ಲ,
ರಾಜಕೀಯ ಉದ್ದೇಶದಿಂದ ಕೂಡಿದೆ. ಇದರ ಪುನರ್ ಬದಲಾವಣೆ ಆಗಬೇಕು. ಕೇಂದ್ರ ಸರ್ಕಾರ ಈಗಾಗಲೇ ಸಮೀಕ್ಷೆ ಮಾಡುವುದಾಗಿ ಹೇಳಿದೆ. ಅಲ್ಲಿವರೆಗೆ ಕಾಯಬೇಕು, ಯಾರನ್ನೋ ಮೆಚ್ಚಿಸಲು ಸಿಎಂ ಸಮೀಕ್ಷೆ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತಾಂತರ ನಿಷೇಧ ಕಾನೂನು ಈಗಾಗಲೇ ಕರ್ನಾಟಕದಲ್ಲಿದೆ. ನಮ್ಮ ಸರ್ಕಾರದಲ್ಲೇ ಇದನ್ನು ಜಾರಿಗೆ ತಂದಿದ್ದೇವೆ. ಒತ್ತಾಯ ಪೂರ್ವಕವಾಗಿ ಮತಾಂತರ, ಆಮಿಷ ಪೂರ್ವಕ ಮತಾಂತರಕ್ಕೆ ಯಾವಾಗಲೂ ನಿಷೇಧ ಇದ್ದೇ ಇದೆ. ರಾಜ್ಯ ಸರ್ಕಾರ ಕಣ್ಣುಮುಚ್ಚಿಕೊಂಡು ದಾರಿ ತಪ್ಪಿಸೋ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.


