ಗುರುವು ವಿದ್ಯಾರ್ಥಿಗಳ ಬಾಳಿನ ಬೆಳಕು

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸ್ಕೂಲ್ ಚಂದನದಲ್ಲಿ ವಿದ್ಯಾರ್ಥಿಗಳು ಗುರುಪೂಣಿಮೆಯನ್ನು ಶ್ರಧ್ಧಾ ಭಕ್ತಿಯಿಂದ ಆಚರಿಸಿದರು.

Advertisement

ಸಂಸ್ಥಾಪಕರಾದ ಟಿ.ಈಶ್ವರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ಸೃಜನಾತ್ಮಕವಾಗಿ ರೂಪಿಸಿಕೊಂಡು ಸಾರ್ಥಕ ವಿದ್ಯಾರ್ಥಿಯ ಜೀವನ ನಡೆಸುತ್ತಾ, ಸಮಾಜದಲ್ಲಿ ಗುರುವಿನ ಮಹತ್ವ ತಿಳಿಸಿ, ಗುರುವಿನಿಂದ ಗುರಿಗಳನ್ನು ಹೇಗೆ ಸಾಧಿಸಬೇಕು ಎಂಬುದನ್ನು ತಿಳಿಸಿದರು.

ನಿರ್ದೇಶಕ ಎಚ್.ಸಿ. ರಟಗೇರಿ ಮಾತನಾಡಿ, ಗುರುವು ವಿದ್ಯಾರ್ಥಿಗಳ ಬಾಳಿನ ಬೆಳಕು. ಒಬ್ಬ ಗುರು ಯಾವಾಗಲೂ ವಿದ್ಯಾರ್ಥಿಗಳಿಗೆ ಸಮಗ್ರತೆ, ಉತ್ತಮ ಬದ್ಧತೆಯ ಮಾರ್ಗವನ್ನು ಮತ್ತು ಆದರ್ಶಮಯ ಮೌಲ್ಯಗಳನ್ನು ಅನುಸರಿಸುವಂತೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here