ಕಾಮನ್ ಸೆನ್ಸ್ ಇಲ್ವಾ!? ರೈತರಂದ್ರೆ ಬೇಕಾಬಿಟ್ಟಿನಾ!?: ಪ್ರತಿಭಟನಾ ಸ್ಥಳಕ್ಕೆ ತಡವಾಗಿ ಬಂದ ತಹಸೀಲ್ದಾರ್ ಗೆ ಬಂಡಿ ತರಾಟೆ!

0
Spread the love

ಗದಗ:- ಗಜೇಂದ್ರಗಡ ತಹಸೀಲ್ದಾರ್ ಕಿರಣಕುಮಾರ್ ಕುಲಕರ್ಣಿಗೆ ಮಾಜಿ ಸಚಿವ ಕಳಕಪ್ಪ ಬಂಡಿ ತೀವ್ರ ಅವಾಜ್ ಹಾಕಿದ್ದಾರೆ.

Advertisement

ರೈತರ ಜಮೀನುಗಳಿಗೆ ವಕ್ಫ್ ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿ ಇಂದು ರಾಜ್ಯದಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿದೆ.

ಅದರಂತೆ ಗದಗ ಜಿಲ್ಲೆ ಗಜೇಂದ್ರಗಡ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲೂ ಪ್ರತಿಭಟನೆ ಜರುಗಿದ್ದು, ಮನವಿ ಸ್ವೀಕರಿಸಲು ತಡಮಾಡಿ ಬಂದ ತಹಸೀಲ್ದಾರ್‌ಗೆ ಏಕವಚನದಲ್ಲೇ ಮಾಜಿ ಸಚಿವ ಬಂಡಿ ಆಕ್ರೋಶ ಹೊರ ಹಾಕಿದ್ದಾರೆ. ನೀನು ಈ ಸರ್ಕಾರ ಸೂರ್ಯ ಚಂದ್ರ ಇರೋವರೆಗೂ ಇರ್ತಿರಾ!? ಅಂತ ಫುಲ್ ಜೋರು ಮಾಡಿದ್ದಾರೆ.

ಮಾಜಿ ಸಚಿವ ಬಂಡಿ ಅವರ ನಿವಾಸದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ, ತಹಸೀಲ್ದಾರ್ ಕಚೇರಿಯವರೆಗೆ ನಡೆದಿದೆ. ಈ ವೇಳೆ ಕಚೇರಿ ಎದುರು 10 ನಿಮಿಷಕ್ಕೂ ಹೆಚ್ಚು ಕಾಲ ಬಂಡಿ ಕಾಯುತ್ತ ನಿಂತಿದ್ದರು. ಬಳಿಕ ಬಿಸಿಲಿನಲ್ಲಿ ನಿಂತು ತಾಳ್ಮೆ ಕಳೆದುಕೊಂಡ ಕಳಕಪ್ಪ ಬಂಡಿ, ತಹಸೀಲ್ದಾರ್ ನೋಡುತ್ತಿದ್ದಂತೆ ಕೋಪಗೊಂಡಿದ್ದಾರೆ.

ತಾಲೂಕಾ ಮೆಜಿಸ್ಟ್ರೇಟ್ ಇದ್ದೀಯಾ.. ಕಾಮನ್ ಸೆನ್ಸ್ ಇಲ್ವಾ ಅಂತಾ ಅವಾಜ್ ಹಾಕಿದ್ದಾರೆ. ದುಡ್ಡು ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಳ್ತೀರಿ. ಜನರಿಂದ ದುಡ್ಡು ತೆಗೆದುಕೊಳ್ಳೊದೇ ನಿಮ್ಮ ಕೆಲಸ ಆಗುತ್ತಾ!? ರೈತರ ಪ್ರತಿಭಟನೆ ಅಂದ್ರೆ ಬೆಲೆ ಇಲ್ವಾ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.


Spread the love

LEAVE A REPLY

Please enter your comment!
Please enter your name here