ಬೆಂಗಳೂರು: ತಾಯಿಗೆ ಚಿಕಿತ್ಸೆ ಕೊಡಿಸಲು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಮದ್ ವಾಸಿಫ್ ಬಂಧಿತ ಆರೋಪಿಯಾಗಿದ್ದು, ಲಾಕ್ ಆಗಿರುವ ಕಾರುಗಳನ್ನ ಸ್ಕೇಲ್ ಬಳಿಸಿ ಓಪನ್ ಮಾಡಿ ಕೈಚಳಕ ತೋರುತ್ತಿದ್ದನು.
ಇನ್ನೂ ಬಾಣಸವಾಡಿಯಲ್ಲಿ ಕಾರಿನಲ್ಲಿ ಹಣ ಚಿನ್ನಾಭರಣ ಇಟ್ಟು ಆಸ್ಪತ್ರೆಗೆ ಒಳಗಡೆ ಹೋಗಿದ್ದಾಗ ಕೈಚಳಕ ತೋರಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯವಳಿ ಆಧರಿಸಿ ಬಂಧಿಸಿದ್ದಾರೆ. ಆರೋಪಿ ನಗರದ ಹಲವು ಕಡೆ ಕೈಚಳಕ ತೋರಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.



