ಧಾರವಾಡ:- ಕರ್ನಾಟಕ ಬ್ಯಾಂಕ್ ಶಟರ್ ಮುರಿದು ಕಳ್ಳತನಕ್ಕೆ ಖದೀಮರು ಯತ್ನಿಸಿರುವ ಘಟನೆ ಧಾರವಾಡ ನಗರದ ಶ್ರೀನಗರ ಸರ್ಕಲ್ ನಲ್ಲಿ ಜರುಗಿದೆ.
ಕಳೆದ ರಾತ್ರಿ ಬ್ಯಾಂಕಿನ ಶಟರ್ ಕೀಲಿ ಮುರಿಯಲು ಯತ್ನಿಸುತ್ತಿದ್ದ ವೇಳೆ ಸ್ಥಳಕ್ಕೆ ಬೀಟ್ ಪೊಲೀಸರು ಬಂದಿದ್ದರಿಂದ ಶಟರ್ ಮುರಿಯಲು ಮುಂದಾಗಿದ್ದ ಕಳ್ಳರು ಪರಾರಿ ಆಗಿದ್ದಾರೆ. ಗಣೇಶ ಹಬ್ಬದ ಹಿನ್ನೆಲೆ ತಡ ರಾತ್ರಿ ಜನ ಒಡಾಟ ಇದ್ದರೂ ಕಳ್ಳತನಕ್ಕೆ ಕಳ್ಳರು ಯತ್ನಿಸಿದ್ದಾರೆ.
ಸದ್ಯ ಪೊಲೀಸ್ ಠಾಣೆಗೆ ದೂರು ನೀಡಲು ಬ್ಯಾಂಕ್ ಸಿಬ್ಬಂದಿ ಮುಂದಾಗಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



