ಇಂದು ನಟ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು, ಸಿನಿಮಾ ರಂಗದವರು ಸೇರಿದಂತೆ ಹಲವರು ಅಪ್ಪುವಿನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಅಂತೆಯೇ ಹಲವರು ಪುನೀತ್ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ. ಇದೀಗ ನಟಿ ಹಾಗೂ ನಿರೂಪಕಿ ಅನುಶ್ರೀ ಕೂಡ ಅಪ್ಪುವಿನ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ನಿಮ್ಮನ್ನು ನೋಡಿ ನಾಚಿ ಕೆಂಪಾಗುತ್ತಿದ್ದ ಕೆನ್ನೆ …ಇಂದು ಕಣ್ಣೇರಿಗೆ ದಾರಿಯಾಗಿದೆ. ನಿಮ್ಮನ್ನು ನೋಡಿ ತಾಳ ತಪ್ಪುತ್ತಿದ್ದ ಹೃದಯ ಇಂದು ಮಂಕಾಗಿ ಕೂತಿದೆ. ನಿಮ್ಮನ್ನು ಹಾಡಿ ಹೊಗಳುತ್ತಿದ್ದ ಕಂಠ ಇಂದು ಕಂಪಿಸುತ್ತಿದೆ. ನಿಮ್ಮನ್ನು ಅಪ್ಪಿಕೊಳ್ಳುತ್ತಿದ್ದ ಕೈಗಳು ಇಂದು ನಿಮ್ಮನ್ನು ಅಪ್ಪಿಕೊಳ್ಳೋಕೆ ಹಾತೊರೆಯುತ್ತಿದೆ ಎಂದು ಅನುಶ್ರೀ ಭಾವುಕರಾಗಿ ಬರೆದುಕೊಂಡಿದ್ದಾರೆ.
ಮುಂದುವರೆದು, ನಿಮ್ಮನ್ನು ಪರಮಾತ್ಮ ಎಂದು ಕೂಗಿದ ನಾಲಿಗೆ ಇಂದು ಆ ಭಗವಂತನಿಗೆ ಶಾಪ ಹಾಕುತ್ತಿದೆ. ನಿಮ್ಮನ್ನು ಎಂದೆಂದಿಗೂ ಸಂಭ್ರಮಿಸೋ ಕೋಟ್ಯಂತರ ಹೃದಯಗಳಿಗೆ ಇಂದು ನಿಮ್ಮನ್ನು ಮತ್ತೆ ಹುಟ್ಟಿ ಬನ್ನಿ ಎಂದು ಬೇಡಿದೆ. HAPPIEST BIRTHDAY TO MY ONE AND ONLY FAVOURITE APPU SIR, ಮಿಸ್ ಯೂ ಸರ್ ಲವ್ ಯೂ ಫಾರ್ ಎವರ್ ಆ್ಯಂಡ್ ಎವರ್ ಎಂದು ಅನುಶ್ರೀ ಬರೆದುಕೊಂಡಿದ್ದಾರೆ.