’ಯೂಸ್ ಲೆಸ್ ಫೆಲೋ’ ಸಿನಿಮಾದ ಟ್ರೇಲರ್ ರಿಲೀಸ್.. ಡಿ.15ಕ್ಕೆ ತೆರೆಗೆ ಬರಲಿದೆ ‘ಮೋಜೋ’ ಹೀರೋ ಮನು ಹೊಸ ಕನಸು

0
Spread the love

ಯೂಸ್ ಲೆಸ್ ಫೆಲೋ’ ಸಿನಿಮಾ ಮೂಲಕ ಡೈರೆಕ್ಷರ್ ಕ್ಯಾಪ್ ತೊಟ್ಟಿರುವ ಮನು ತಮ್ಮ ಚೊಚ್ಚಲ ಪ್ರಯತ್ನದ ಮೊದಲ ಝಲಕ್ ನ್ನು ಅನಾವರಣ ಮಾಡಿದ್ದಾರೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಈ ವೇಳೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಟ ಕಂ ನಿರ್ದೇಶಕ ಮನು ಯು.ಬಿ ಮಾತನಾಡಿ, ಮೊದಲು ಹೀರೋ ಆದಾಗ ಬಂದು ಕುಳಿತು ಮಾತನಾಡಿಕೊಂಡು ಹೋಗುತ್ತಿದ್ದೆ.

Advertisement

ಇವತ್ತು ನಿರ್ದೇಶಕನ ಜವಾಬ್ದಾರಿ ತೆಗೆದುಕೊಂಡು ಇಲ್ಲಿ ಕುಳಿತು ಮಾತನಾಡುತ್ತಿರುವುದು ತುಂಬ ಹೆಮ್ಮೆ ಅನಿಸುತ್ತಿದೆ. ಇಡೀ ತಂಡ ನನಗೆ ಬೆಂಬಲದಿಂದ ಈ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ನಾಳೆ ಚಿತ್ರೀಕರಣ ಬಗ್ಗೆ ಹಿಂದಿನ ದಿನವೇ ಚರ್ಚೆ ನಡೆಸುತ್ತಿದ್ದೆವು. ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ನಿಮ್ಮ ಸಹಕಾರ ನಮಗೆ ಬೇಕು. ಹಿಂದಿನ ತಪ್ಪುಗಳನ್ನು ತಿದ್ದುಕೊಂಡು ಯೂಸ್ ಲೆಸ್ ಫೆಲೋ ಸಿನಿಮಾ ಮಾಡಿದ್ದೇನೆ ಎಂದರು.

ನಟ ವಿಜಯ್ ಸೂರ್ಯ ಮಾತನಾಡಿ, ಮನು ಇಂಡಸ್ಟ್ರೀಗೆ ಬರುವ ಮೊದಲೇ ಪರಿಚಯ. ಮನು ಎರಡು ಸಿನಿಮಾ ನೋಡಿದ್ದೇನೆ. ಗುಡ್ ಪರ್ಫಾಮರ್ ಅವನು. ಅವನ ಪರ್ಫಾಮೆನ್ಸ್ ನಲ್ಲಿ ಒಂದು ಹಿಡತವಿದೆ. ತುಂಬ ಕಮ್ಮಿ ನಟರಲ್ಲಿ ನಾನು ಅದನ್ನು ನೋಡಿದ್ದೇನೆ. ಕಣ್ಣು ತುಂಬಾ ಪವರ್ ಫುಲ್. ಅದನ್ನು ತುಂಬಾ ಬಾರಿ ಹೇಳಿದ್ದೇನೆ. ಇದು ಮನು ಮೂರನೇ ಸಿನಿಮಾ. ಮೂರನೇ ಚಿತ್ರಕ್ಕೆ ಡೈರೆಕ್ಷನ್, ಸ್ಕ್ರೀನ್ ಪ್ಲೇ, ಡೈಲಾಗ್, ಪ್ರೊಡಕ್ಷನ್ ಎಲ್ಲವನ್ನೂ ತೆರೆಮೇಲೆ ಹೊತ್ತುಕೊಂಡು ಈ ಸಿನಿಮಾ ಮಾಡಿದ್ದಾನೆ. ತುಂಬಾ ಕಷ್ಟ ಸಿನಿಮಾ ಮಾಡುವುದು. ತುಂಬಾ ಪ್ರಾಮಾಣಿಕವಾಗಿ ಕಷ್ಟಪಟ್ಟು ಮನು ಸಿನಿಮಾ ಮಾಡಿದ್ದಾನೆ ನಿಮ್ಮ ಬೆಂಬಲ ಇರಲಿ ಎಂದರು.

ಮೋಜೋ, ನಾನು ನನ್ ಜಾನು ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಮನು ಯೂಸ್ ಲೆಸ್ ಫೆಲೋ ಸಿನಿಮಾಗೆ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿ‌ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಕಾಣದ ಕಡಲಿಗೆ, ಬ್ರೋಕನ್, ನೆನಪಿದೆಯಾ ಎಂಬ ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಅವರೀಗ ಆ ಅನುಭವ ಇಟ್ಟುಕೊಂಡು ಯೂಸ್ ಲೆಸ್ ಫೆಲೋ ಚಿತ್ರ ಕಥೆ ಎಣೆದು ಆಕ್ಷನ್ ಕಟ್ ಹೇಳಿದ್ದಾರೆ.

ಬಾಲ್ಯದಿಂದಲೇ ಸಿನಿಮಾ ಕನಸು ಇಟ್ಟುಕೊಂಡಿದ್ದ ಮನು ಯು.ಬಿ ಒಂದಷ್ಟು ವರ್ಷಗಳ ಕಾಲ ಐಟಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸಿದ್ದರು. ಆದರೆ ಸಿನಿಮಾ ಮೇಲಿನ ಸೆಳೆತ ಅವರನ್ನು ಚಿತ್ರರಂಗಕ್ಕೆ ಕರೆತಂದು ನಿಲ್ಲಿಸಿದೆ. ನಾಯಕನಾಗಿ ಗಮನಸೆಳೆದಿರುವ ಅವರೀಗ ನಿರ್ದೇಶನದಲ್ಲಿ ಛಾಪೂ ಮೂಡಿಸುವ ಎಲ್ಲಾ ಸೂಚನೆ ಸಿಕ್ಕಿದೆ. ಈಗಾಗಲೇ ಯೂಸ್ ಲೆಸ್ ಫೆಲೋ ಸಿನಿಮಾದ ಮೆರವಣಿಗೆ ಹಾಗೂ ಡೋಂಟ್ ಕೇರ್ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

ಲವ್ ಕಂ ಆಕ್ಷನ್ ಕಥಾಹಂದರ ಹೊಂದಿರುವ ಯೂಸ್ ಲೆಸ್ ಫೆಲೋ ಸಿನಿಮಾದಲ್ಲಿ ಮನುಗೆ ಜೋಡಿಯಾಗಿ ದಿವ್ಯಾ ಗೌಡ ನಟಿಸಿದ್ದು, ವಿಜಯ್ ಸೂರ್ಯ ಗೆಸ್ಟ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದು, ವಿನೋದ್ ಗೊಬ್ಬರಗಾಲ, ಜೆಕೆ ಮೈಸೂರು, ಸುರೇಶ್ ತಾರಾಬಳಗದಲ್ಲಿದ್ದಾರೆ. ರಾಜರತ್ನ ಎಂಬ ಪ್ರೊಡಕ್ಷನ್ ಹೌಸ್ ನಡಿ ಮನು ತಾಯಿ ರತ್ನ ಬಸವರಾಜು ಚಿತ್ರ ನಿರ್ಮಾಣ ಮಾಡುತ್ತಿದ್ದು,

ಹರಿವು, ಪಿಂಗಾರ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಿರ್ಮಾಪಕ ಅವಿನಾಶ್ ಶೆಟ್ಟಿ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ವಿಜಯ್ ಸಿಂದಿಗಿ ಸಂಕಲನ, ಶಿವಪ್ರಸಾದ್ ಸಂಗೀತ ಚಿತ್ರಕ್ಕಿದೆ. ಹಾಸನ, ಸಕಲೇಶಪುರ, ಹುಬ್ಬಳ್ಳಿ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಯೂಸ್ ಲೆಸ್ ಫೆಲೋ ಸಿನಿಮಾ ಇದೇ ಡಿಸೆಂಬರ್ 15ಕ್ಕೆ ತೆರೆಗೆ ಬರಲಿದೆ.


Spread the love

LEAVE A REPLY

Please enter your comment!
Please enter your name here