ಬೆಂಗಳೂರು: ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರಿಗೆ ಇತ್ತೀಚೆಗೆ ಬಸ್ ಟಿಕೆಟ್ ದರ ಏರಿಕೆ ಮಾಡಿ ಶಾಕ್ ಕೊಟ್ಟಿತ್ತು. ಸಾರಿಗೆ ಇಲಾಖೆ ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲೂಕೆಆರ್ಟಿಸಿ, ಕೆಕೆಆರ್ಟಿಸಿ ಬಸ್ಗಳ ಟಿಕೆಟ್ ದರ ಪರಿಷ್ಕರಣೆ ಮಾಡಿ ಶೇ 15 ರಷ್ಟು ದರ ಹೆಚ್ಚು ಮಾಡಿತ್ತು.
ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಪ್ರಯಾಣ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಇದೀಗ ಬಿಎಂಟಿಸಿ ಪಾಸ್‌ಗಳ ದರದಲ್ಲಿ ಏರಿಕೆಯಾಗಿದೆ.
ನಾಳೆಯಿಂದಲೇ ಬಿಎಂಟಿಸಿ ಪಾಸ್‌ಗಳ ದರ ಏರಿಕೆ ಆಗಲಿದೆ. ಹಳೆಯ ಪಾಸ್ ದರವನ್ನು ಪರಿಷ್ಕರಿಸಿ ಹೊಸ ದರ ಕುರಿತು ಪ್ರಕಟಣೆ ಹೊರಡಿಸಲಾಗಿದೆ.
ಬಿಎಂಟಿಸಿ ಡೈಲಿ ಪಾಸ್ – 70 ರೂ. (ಹಳೆಯ ದರ), 80 ರೂ. (ಹೊಸ ದರ)
ಬಿಎಂಟಿಸಿ ವಾರದ ಪಾಸ್ – 300 ರೂ. (ಹಳೆಯ ದರ), 350 ರೂ. (ಹೊಸ ದರ)
ಹಿರಿಯ ನಾಗರಿಕರ ಮಾಸಿಕ ಪಾಸ್ – 945 ರೂ. (ಹಳೆಯ ದರ), 1,080 ರೂ. (ಹೊಸ ದರ)
ಸಾಮಾನ್ಯ ಮಾಸಿಕ ಪಾಸ್ – 1,050 ರೂ. (ಹಳೆಯ ದರ), 1,200 ರೂ. (ಹೊಸ ದರ)
ನೈಸ್ ರೋಡ್ ಮಾಸಿಕ ಪಾಸ್ – 2,200 ರೂ. (ಹಳೆಯ ದರ), 2,350 ರೂ. (ಹೊಸ ದರ).