ಬೆಂಗಳೂರು: ವಿನಯ್ ಗೌಡ ಹಾಗೂ ರಜತ್ ಇತ್ತೀಚೆಗೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆ. ಈಗ ಅದೇ ವಿಚಾರ ಸಂಕಷ್ಟ ತಂದಿದೆ. ಹೌದು, ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಹಾಗೂ ರಜತ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನೂ ಇದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರಜತ್ ಗೆ ನೊಟೀಸ್ ನೀಡಿದ್ದರು. ಆದ್ದರಿಂದ ಗಂಡನ ಬದಲು ಪತ್ನಿ ವಿಚಾರಣೆಗೆ ಹಾಜರಾಗಿದ್ದಾರೆ.
ರಜತ್ ಕೊಪ್ಪಳದಲ್ಲಿ ಶೂಟಿಂಗ್‌ನಲ್ಲಿರುವ ನಿಮಿತ್ತ ಪತ್ನಿ ಅಕ್ಷಿತಾ ವಿಚಾರಣೆ ಎದುರಿಸಿದ್ದಾರೆ. ರಜತ್ ಚಿತ್ರೀಕರಣದಲ್ಲಿ ಭಾಗಿಯಾಗಿರೋ ಹಿನ್ನೆಲೆ ಫೋನ್ ಸ್ವಿಚ್ ಆಫ್ ಆಗಿದೆ. ನಾಳೆ ಬೆಂಗಳೂರಿಗೆ ರಜತ್ ಆಗಮಿಸುತ್ತಿದ್ದು, ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಪತ್ನಿ ತಿಳಿಸಿದ್ದಾರೆ. ವಿಚಾರಣೆ ಎದುರಿಸಿ ಅಕ್ಷಿತಾ ತೆರಳಿದ್ದಾರೆ.



