ಗದಗ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಮುಂಡರಗಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿ ಕೊಲೆ ನಡೆದಿದ್ದು, ಒಡಹುಟ್ಟಿದ ತಂಗಿಗೆ ಹೊಟ್ಟೆಗೆ ಚಾಕುವಿನಿಂದ ಇರಿದು, ಕತ್ತಿನ ಮೇಲೆ ಕಾಲಿಟ್ಟು ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ.
Advertisement
ಕೊಲೆಯ ನಂತರ ಪೊಲೀಸ್ ಠಾಣೆಗೆ ಆರೋಪಿ ಈಶ್ವರಪ್ಪ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕಾಳಮ್ಮ ಬೆಟಗೇರಿ ಕೊಲೆಗೀಡಾದ ಮಹಿಳೆ ಎನ್ನಲಾಗಿದೆ. ಈಶ್ವರಪ್ಪ ರಂಗಪ್ಪ ಕ್ಯಾದಿಗೆಹಳ್ಳಿ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ತನ್ನ ಒಡಹುಟ್ಟಿದ ಸಹೋದರಿ ಕಾಳಮ್ಮನನ್ನು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.