HomePolitics Newsಮುನಿರತ್ನ ವಿರುದ್ಧ ಸಿಡಿದೆದ್ದ ಸಂತ್ರಸ್ಥ ಮಹಿಳೆ: ಅತ್ಯಾಚಾರದ ಇಂಚಿಂಚು ಕಹಾನಿ ರಿವೀಲ್!

ಮುನಿರತ್ನ ವಿರುದ್ಧ ಸಿಡಿದೆದ್ದ ಸಂತ್ರಸ್ಥ ಮಹಿಳೆ: ಅತ್ಯಾಚಾರದ ಇಂಚಿಂಚು ಕಹಾನಿ ರಿವೀಲ್!

For Dai;y Updates Join Our whatsapp Group

Spread the love

ಬೆಂಗಳೂರು:– ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಮುನಿರತ್ನ ‌ಜೈಲು ಪಾಲಾಗಿದ್ದಾರೆ. ಆದ್ರೆ ಅವರ ವಿರುದ್ಧದ ಆರೋಪಗಳು ಮಾತ್ರ ನಿಂತಿಲ್ಲ. ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿರುವ ಕೇಸ್ ನಲ್ಲಿ ಮಾಜಿ ಸಿಎಂಗಳ ಹೆಸರು ಸದ್ಯ ಕೂಡ ತಳಕು ಹಾಕಿಕೊಂಡಿದೆ. ಸಂತ್ರಸ್ಥೆ ಸಿಡಿಸಿದ ಹೊಸ ಬಾಂಬ್ ರಾಜ್ಯ ರಾಜಕಾರಣವನ್ನೇ ಬೆಚ್ಚಿ ಬೀಳಿಸಿದೆ.

ನನ್ನನ್ನ ಎರಡನೇ ಮಹಡಿಗೆ ಮುನಿರತ್ನ ಕರೆದುಕೊಂಡು ಹೋದ್ರು. ದಿವಾನ್ ಕಾಟ್ ಮೇಲೆ ಕೂರಿಸಿ ಸಹಕರಿಸುವಂತೆ ಕೇಳಿಕೊಂಡ್ರು. ಒಪ್ಪದಿದ್ದಾಗ ಬೆದರಿಸಿ ದಿವಾನ್ ಕಾಟ್ ಮೇಲೆಯೇ ನನ್ನ ಮೇಲೆ‌ ಅತ್ಯಾಚಾರ ಎಸಗಿದ್ರು ಎಂದು ಆರೋಪಿಸಿರುವ ಮಹಿಳೆ ಪೊಲೀಸ್ ಅಧಿಕಾರಿಗಳಿಂದ ಹಿಡಿದು ಪಕ್ಷದ ಮುಖಂಡರುಗಳು ಸೇರಿದಂತೆ ಮಾಜಿ ಸಿಎಂಗಳ ಖಾಸಗಿ ವಿಡಿಯೋ ಮಾಡಿಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಹೌದು. ಮಾಜಿ ಸಚಿವ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ ಸಂತ್ರಸ್ಥ ಮಹಿಳೆ ಅವರ ವಿರುದ್ಧ ಮತ್ತಷ್ಟು ಆರೋಪಗಳ ಸುರಿಮಳೆಯನ್ನೇಗೈದಿದ್ದಾಳೆ. ಮಾಜಿ ಕಾರ್ಪೋರೇಟರ್ ಮಂಜುಳಾ ವಾಸುದೇವ್ ಮೂಲಕ ಪರಿಚಯವಾದ ಮುನಿರತ್ನ ತನನ್ನ ಎರಡನೇ ಫ್ಲೋರ್ ಕರೆದುಕೊಂಡು ಹೋಗಿದ್ರು. ಬೆದರಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ರು. ಅದೇ ಖಾಸಗಿ ವಿಡಿಯೋ ತೋರಿಸಿ ಬೇರೆ ಬೇರೆ ಪ್ರಭಾವಿ ವ್ಯಕ್ತಿಗಳ ಖಾಸಗಿ ವೀಡಿಯೊ ಸೆರೆ ಹಿಡಿಬೇಕು ಅಂತಾ ಬೆದರಿಕೆ ಹಾಕಿದ್ರು ಎಂದು ಆರೋಪಿಸಿದ್ದಾಳೆ. ಅಷ್ಟೇ ಅಲ್ಲ, ಬೇರೆ ಬೇರೆ ಮಹಿಳೆಯರನ್ನ ಬಳಸಿಕೊಂಡು ಪೊಲೀಸ್ ಅಧಿಕಾರಿಗಳನ್ನು ಹನಿ ಟ್ರ್ಯಾಪ್ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.

ಯೆಸ್, ಕೇವಲ ರಾಜಕೀಯ ಮುಖಂಡರು ಮಾತ್ರವಲ್ಲ. ಇಬ್ಬರು ಮಾಜಿ ಸಿಎಂಗಳ ಖಾಸಗಿ ಕ್ಷಣಗಳ ವಿಡಿಯೋ ಸೆರೆ ಹಿಡಿದಿಟ್ಟುಕೊಂಡಿರುವ ಮುನಿರತ್ನ ಅದನ್ನ ತೋರಿಸಿ ಬೆದರಿಸಿದ್ದಾರೆ ಎಂದು ಸಂತ್ರಸ್ಥ ಮಹಿಳೆ ಆರೋಪಿಸಿದ್ದಾರೆ. ಅಷ್ಟೇ ಅದೇ ವಿಡಿಯೊ ಇಟ್ಟುಕೊಂಡು ಮಂತ್ರಿಯಾಗಿದ್ದು ಅಂತಾ ಹೇಳಿಕೊಂಡಿದ್ದರಂತೆ. ಹಾಗಾದ್ರೆ ಆ ಇಬ್ಬರು ಮಾಜಿ ಸಿಎಂಗಳು ಯಾರು ಅನ್ನೋ ಚರ್ಚೆ ಸದ್ಯ ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ.

ಸದ್ಯ ಪ್ರಕರಣ ತನಿಖೆ ನಡೆಸ್ತಿರುವ ಎಸ್ಐಟಿ ಗೆ ಎಲ್ಲಾ ಮಾಹಿತಿ ನೀಡಿರೋದಾಗಿ ಹೇಳಿರುವ ಮಹಿಳೆ ಸಮಯ ಬಂದಾಗ ವಿಡಿಯೋ ರಿಲೀಸ್ ಮಾಡೋದಾಗಿಯೂ ಹೇಳಿದ್ದು ಸಂಚಲನ ಸೃಷ್ಟಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!