ಜಕ್ಕಲಿಯ ಗ್ರಾಮದೇವತೆಗಳ ಜಾತ್ರೆ ಸಂಪನ್ನ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದೇವತೆಗಳ ಜಾತ್ರಾ ಉತ್ಸವ ಮೆರವಣಿಗೆಯು ರವಿವಾರ ಶ್ರದ್ಧಾ ಭಕ್ತಿಯಿಂದ ಸಕಲ ವಾದ್ಯ ವೈಭವದೊಂದಿಗೆ ವಿಜೃಂಭಣೆಯಿಂದ ಜರುಗಿತು.

Advertisement

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ನೂರಾರು ಮಹಿಳೆಯರು ತಮ್ಮ ಮನೆಗೆ ಪರ ಊರುಗಳಿಂದ ಆಗಮಿಸಿದ್ದ ಬೀಗರು, ಬಿಜ್ಜರೊಂದಿಗೆ ಹೊಸ ಬಟ್ಟೆ ಧರಿಸಿ ದೇವತೆಗಳಿಗೆ ನೈವೇದ್ಯ, ಹಣ್ಣು, ಕಾಯಿ, ಬಿತ್ತುವ ಬೀಜ ಉಡಿ ತುಂಬಿ ಭಕ್ತಿಯನ್ನು ಸಮರ್ಪಿಸಿದರು.

ಗ್ರಾಮದೇವತೆಗಳ ಮಂಟಪದಿಂದ ಪೂಜಾ ವಿದಿ-ವಿಧಾನದೊಂದಿಗೆ ಸಂಜೆ 6ಕ್ಕೆ ಉತ್ಸವದ ಮೆರವಣಿಗೆ ಸಾಗಿ ಶ್ರೀ ಮಾರುತೇಶ್ವರ ದೇವಸ್ಥಾನ, ಶ್ರೀ ಈಶ್ವರ ದೇವಸ್ಥಾನ, ಶ್ರೀ ಕಲ್ಮೇಶ್ವರ ದೇವಸ್ಥಾನ, ಶಿವಶರಣರಾದ ಅಣ್ಣಯ್ಯ-ತಮ್ಮಯ್ಯನವರ ಮನೆಯಿಂದ ಪೂಜೆಗೊಂಡು ಬಳಿಕ ದ್ಯಾಮಮ್ಮ ದೇವಸ್ಥಾನಕ್ಕೆ ತಲುಪಿತು.

ವಿವಿಧ ಬಗೆಯ ಹೂವಿನಿಂದ ಅಲಂಕೃತಗೊಂಡು ವಿರಾಜಮಾನರಾಗಿ ಕುಳಿತಿದ್ದ ದೇವತೆಯರು ಕಂಗೋಳಿಸಿದರು. ವಿವಿಧ ವಿಶೇಷ ಧಾರ್ಮಿಕ ಸೇವೆಗಳು, ಹರಕೆ, ಕಾಣಿಕೆಗಳನ್ನು ದೇವತೆಯರಿಗೆ ಭಕ್ತರು ಸಮರ್ಪಣೆ ಮಾಡಿದರು. ದೇವತೆಯರಿಗೆ ಸೀರೆ, ಖಣ, ಬಳೆ, ಅರಿಷಿಣಕೊಂಬು, ಕೊಬ್ಬರಿ ಬಟ್ಟಲು. ಉತ್ತತ್ತಿ, ಎಲಿ, ಅಡಿಕೆ, ಉಡಿ ತುಂಬುವ ಮೂಲಕ ದೇವತೆಗಳಲ್ಲಿ ಪ್ರಾರ್ಥಿಸಿದರು.

ಈ ಮಹೋತ್ಸವದಲ್ಲಿ ಸರ್ವ ಜಾತಿ ಜನಾಂಗದವರು, ಹಿರಿಯರು, ಯುವಕರು, ಮಹಿಳೆಯರು, ಊರಿನ ಹಾಗೂ ಸುತ್ತಮುತ್ತಲಿನ ಸಕಲ ಭಕ್ತಾದಿಗಳು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here