ಹುಬ್ಬಳ್ಳಿ:ವಕ್ಪ್ ಗೆಜೆಟ್ ರದ್ದು ಪಡಿಸಿ ರೈತರ ಹಾಗೂ ಸಮಾಜದ ಹಿತವನ್ನು ಕಾಪಾಡಬೇಕು ಎಂದು ವಿಧಾನ ಪರಿಷತ್ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ನಗರದಲ್ಲಿಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಮೀರ್ ಅಹ್ಮದ್ ಅವರು ಮುಖ್ಯಮಂತ್ರಿ ಆದೇಶದ ಮೇಲೆ ಮಾಡ್ತಿದ್ದೀನಿ ಅಂದಿದ್ದಾರೆ. ಸಿಎಂ ಅವರು ಕಲಂ 11ರಲ್ಲಿ ವಕ್ಪ್ ಅಂತ ತೆಗೆಯುತ್ತೇವೆ ಅಂತಾರೇ. ಗೆಜೆಟ್ ನಲ್ಲಿಯೇ ಇದರ ಇತ್ಯರ್ಥವಾಗಬೇಕು. ಅಂದಾಗಲೇ ರೈತರಿಗೆ ಜಮೀನು ಸಿಗುತ್ತೇ ಎಂದರು.
ಇನ್ನೂ ಕಾಂಗ್ರೆಸ್ ರೈತರ ಆಸ್ತಿ ಕಬಳಿಸುವ ಕಾರ್ಯ ಮಾಡ್ತಿದೆ. ಅನ್ನದಾತನ ಹಾಗೂ ದೇವಸ್ಥಾನಗಳನ್ನು ಒಕ್ಕಲೆಬ್ಬಿಸುವ ಕಾರ್ಯವನ್ನು ಮಾಡ್ತಿದೆ. 1974ರ ಗೆಜೆಟ್ ರದ್ದು ಪಡಿಸಿ ರೈತರ ಹಾಗೂ ಸಮಾಜದ ಹಿತವನ್ನು ಕಾಪಾಡಬೇಕು. ಇಸ್ಲಾಂ ಕಾನೂನಿನಲ್ಲಿ, ಯಾವುದೇ ವ್ಯಕ್ತಿ ಇಸ್ಲಾಂ ಧರ್ಮದ ಪಾಲಿಸದೇ ಇದ್ದರೇ ಪಾಪಿಗಳು. ಅವರಿಂದ ಯಾವುದೇ ದಾನ ಧರ್ಮ ತೆಗೆದುಕೊಳ್ಳಬಾರದು ಎಂಬುವುದು ಇದೆ. ಹೀಗಿದ್ದರೂ ವಕ್ಪ್ ಆಸ್ತಿ ಕಬಳಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.