ಧಾರವಾಡ: ದಿನದಿಂದ ದಿನಕ್ಕೆ ಉತ್ತರ ಕರ್ನಾಟಕದಲ್ಲೂ ವರುಣಾರ್ಭಟ ಅಬ್ಬರಿಸ್ತಿದೆ. ನಿರಂತರ ಮಳೆಯಿಂದಾಗಿ ಮನೆಯ ಗೋಡೆ ಕುಸಿದಿದ್ದರಿಂದ ಪಕ್ಕದ ಗುಡಿಸಲಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ.
Advertisement
ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಗುಡಿಸಲಲ್ಲಿ ವಾಸವಿದ್ದ 48 ವರ್ಷದ ಯಲ್ಲಪ್ಪ ರಾಮಣ್ಣ ಎಂಬಾತ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೃತ ಯಲ್ಲಪ್ಪ ಪತ್ನಿ ಹನುಮವ್ವ, ಮಗಳು ಯಲ್ಲವ್ವ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.