ವಾಷಿಂಗ್ಟನ್: ಮುಂದಿನ 2-3 ವಾರಗಳಲ್ಲಿ ಇರಾನ್ ವಿರುದ್ಧದ ಯುದ್ಧ ಅಂತ್ಯವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇಂಧನ ಬೆಲೆ ಏರಿಕೆ ಪರಿಣಾಮ ಕುರಿತು ಮಾತನಾಡಿದ ಟ್ರಂಪ್, ಇರಾನ್ ವಿರುದ್ಧದ ಯುದ್ಧ ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಅಂತ್ಯಗೊಳ್ಳಲಿದೆ. ನಾವು ನಮ್ಮ ಕೆಲಸವನ್ನು ಮುಗಿಸುತ್ತಿದ್ದೇವೆ. ಬಹುಶಃ ಎರಡು ಅಥವಾ ಮೂರು ವಾರಗಳಲ್ಲಿ ನಾವು ಮುಗಿಸಲಿದ್ದೇವೆ. ನಾವು ಬೇಗನೇ ಇರಾನ್ ಬಿಟ್ಟು ಹೋಗಬೇಕಿದೆ. ಇರಾನ್‌ನಲ್ಲಿ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಕೊನೆಗೊಳಿಸಲಾಗುವುದು. ಇರಾನ್ ಸೋಲಿನ ಸನಿಹದಲ್ಲಿದೆ ಎಂದು ಹೇಳಿದ್ದಾರೆ.
ಅಮೆರಿಕದ ಕಾರ್ಯಾಚರಣೆಯ ಅಂತ್ಯವು ಇರಾನ್‌ನ ಜೊತೆ ಯಾವುದೇ ಒಪ್ಪಂದ ಅವಲಂಬಿಸಿಲ್ಲ. ಅವರು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಿಲ್ಲ. ಇರಾನ್‌ಗೆ ಅಣ್ವಸ್ತ್ರ ತಯಾರಿಸಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿದಾಗ ನಾವು ಹೊರಡುತ್ತೇವೆ. ಒಂದು ವೇಳೆ ರಾಜತಾಂತ್ರಿಕವಾಗಿ ಪರಿಹಾರ ದೊರಕಿದರೆ ಯುದ್ಧ ಇನ್ನೂ ಬೇಗನೇ ಕೊನೆಗೊಳ್ಳಬಹುದು. ಅವರು ಸಹ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ನಮಗಿಂತಲೂ ಹೆಚ್ಚಾಗಿ ಅವರೇ ಬಯಸುತ್ತಿದ್ದಾರೆ ಎಂದಿದ್ದಾರೆ.



