ದಕ್ಷಿಣ ಭಾರತದ ಬಹುಚರ್ಚಿತ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸುದ್ದಿ ಕೊನೆಗೂ ಅಧಿಕೃತ ಸ್ವರೂಪ ಪಡೆದಿದೆ!
ಕಳೆದ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಕಳೆದ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಬ್ಯಾಚುಲರ್ ಪಾರ್ಟಿ, ವಿದೇಶಿ ಟ್ರಿಪ್‌ಗಳು, ಶಾಪಿಂಗ್—all eyes were on them! ಆದರೆ ಇಬ್ಬರೂ ಮದುವೆ ವಿಚಾರದಲ್ಲಿ ಮೌನವಾಗಿದ್ದರು.
ಇಂದು (ಫೆಬ್ರವರಿ 22) ರಶ್ಮಿಕಾ ಮೊದಲ ಬಾರಿಗೆ ಮೌನ ಮುರಿದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಶೇಷವೇನೆಂದರೆ ತಮ್ಮ ಮದುವೆಗೆ ‘The Wedding of Virosh’ ಎಂದು ಹೆಸರಿಟ್ಟಿದ್ದಾರೆ!
ವಿಜಯ್ + ರಶ್ಮಿಕಾ = ‘ವಿರೋಶ್’ ಎಂಬ ಹೆಸರು ಅಭಿಮಾನಿಗಳ ಸೃಷ್ಟಿ. ಅದೇ ಹೆಸರನ್ನು ಮದುವೆಗೆ ಇಟ್ಟು, “ನಮ್ಮ ಅಭಿಮಾನಿಗಳ ಗೌರವಾರ್ಥವಾಗಿ ಈ ಹೆಸರನ್ನು ಇಟ್ಟಿದ್ದೇವೆ” ಎಂದು ರಶ್ಮಿಕಾ ತಿಳಿಸಿದ್ದಾರೆ. “ನೀವು ನಮ್ಮ ಒಂದು ಭಾಗ” ಎಂದು ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ಮೂಲಗಳ ಪ್ರಕಾರ:
-
ಫೆಬ್ರವರಿ 22 – ಮೊದಲ ಶಾಸ್ತ್ರಗಳು
-
ಫೆಬ್ರವರಿ 24 – ಮೆಹಂದಿ
-
ಫೆಬ್ರವರಿ 25 – ಹಳದಿ
-
ಫೆಬ್ರವರಿ 26 – ಮದುವೆ
-
ಮಾರ್ಚ್ 04 – Taj Krishna ನಲ್ಲಿ ಅದ್ಧೂರಿ ರಿಸೆಪ್ಷನ್ ನಡೆಯಲಿದೆ
ಸೆಲೆಬ್ರಿಟಿ ವಲಯದಲ್ಲಿ ಈಗ ‘ವಿರೋಶ್ ವೆಡ್ಡಿಂಗ್’ವೇ ಹಾಟ್ ಟಾಪಿಕ್!



