HomeKarnataka NewsMandya: ಸಾಲದವರ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಮಹಿಳೆ!

Mandya: ಸಾಲದವರ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಮಹಿಳೆ!

For Dai;y Updates Join Our whatsapp Group

Spread the love

ಮಂಡ್ಯ:- ಸಾಲದವರ ಕಿರುಕುಳ ತಾಳಲಾರದೆ ಮನೆಯಲ್ಲೇ ನೇಣು ಬಿಗಿದುಕೊಂಡು ಮಹಿಳೆ ನೇಣಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮಲಿಯೂರು ಗ್ರಾಮದಲ್ಲಿ ಜರುಗಿದೆ.

ಇದೇ ಗ್ರಾಮದ 38 ವರ್ಷದ ಮಹಾಲಕ್ಷ್ಮಿ ಮೃತ ಮಹಿಳೆ. ಈಕೆ ಧರ್ಮಸ್ಥಳ ಸಂಘದಲ್ಲಿ 2 ಲಕ್ಷ ರೂ.ಸಾಲ ತೆಗೆದುಕೊಂಡಿದ್ದಳು. ಅದರಂತೆ ಪ್ರತಿ ಬುಧವಾರ 1700 ಕಂತು ಕಟ್ಟಬೇಕಿತ್ತು. ಆದರೆ ಇತ್ತೀಚೆಗೆ ಸಾಲ ತೀರಿಸಲು ಪರದಾಡುತ್ತಿದ್ದರು. ಅಲ್ಲದೇ ಹಣ ಕಟ್ಟಲು ಮಹಿಳೆ ಸಮಯಾವಕಾಶ ಕೇಳಿದ್ದರೂ ಕೊಡದೆ ಸಂಘದ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ಈ ವೇಳೆ ಮನನೊಂದು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಕೂಡಲೇ ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಮೃತ ದೇಹವನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ನೆನ್ನೆಯಷ್ಟೆ ಧರ್ಮಸ್ಥಳ ಸಂಘದ ಅಧಿಕ ಬಡ್ಡಿ ಬಗ್ಗೆ ಶಾಸಕ ನರೇಂದ್ರ ಸ್ವಾಮಿ ಆರೋಪಿಸಿದರು. ಈ ಆರೋಪಕ್ಕೆ ಈ ಘಟನೆ ಪುಷ್ಟಿ ನೀಡುವಂತೆ ಮಾಡಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!