HomeKarnataka Newsಬೆಂಗಳೂರು ಎಂಬ ಪದದಲ್ಲೇ ಲ್ಯಾಂಡ್ ಮಾಫಿಯಾ ಇದೆ: ಶೋಭಾ ಕರಂದ್ಲಾಜೆ ಕಿಡಿ!

ಬೆಂಗಳೂರು ಎಂಬ ಪದದಲ್ಲೇ ಲ್ಯಾಂಡ್ ಮಾಫಿಯಾ ಇದೆ: ಶೋಭಾ ಕರಂದ್ಲಾಜೆ ಕಿಡಿ!

For Dai;y Updates Join Our whatsapp Group

Spread the love

ಮಂಗಳೂರು:- ರಾಮನಗರಕ್ಕೆ ಬೆಂಗಳೂರು ಹೆಸರು ಸೇರಿದ್ದೇ ಲ್ಯಾಂಡ್ ಮಾಫಿಯಾಕ್ಕಾಗಿ ಎಂದು ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ಹೊರ ಹಾಕಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರು ಎನ್ನುವ ಪದದಲ್ಲೇ ಲ್ಯಾಂಡ್ ಮಾಫಿಯಾ ಇದೆ. ರಾಮನಗರದ ಹೆಸರು ಬದಲಿಗೆ ಬೆಂಗಳೂರು ಸೇರಿಸಿದ್ದೇ ಲ್ಯಾಂಡ್ ಮಾಫಿಯಾಕ್ಕಾಗಿ. ಬೆಂಗಳೂರು ಸುತ್ತ ಯಾರು ಲ್ಯಾಂಡ್ ಮಾಫಿಯಾ ಮಾಡುತ್ತಿದ್ದಾರೋ ಅವರಿಗೆ ರಾಮನಗರ ಹೆಸರು ಬೇಕಾಗಿಲ್ಲ. ಅವರಿಗೆ ಬೆಂಗಳೂರು ಹೆಸರು ಬೇಕು.

ಯಾಕೆಂದರೆ ಅವರ ಜಮೀನಿಗೆ ವ್ಯಾಲ್ಯೂ ಬರಬೇಕು. ಈ ಕಾರಣಕ್ಕಾಗಿ ರಾಮನಗರ ಹೆಸರು ತೆಗೆದು ಲ್ಯಾಂಡ್ ಮಾಫಿಯಾ ಶಕ್ತಿಗಳು, ದೊಡ್ಡ ದೊಡ್ಡ ಕುಳಗಳು ಬೆಂಗಳೂರು ದಕ್ಷಿಣ ಎಂದು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!