ರವಿಯವರು ಬಳಸಿರುವ ಪದ ಕ್ರಿಮಿನಲ್ ಅಫೆನ್ಸ್ ಅನಿಸಿಕೊಳ್ಳುತ್ತದೆ: ಸಿಎಂ ಸಿದ್ದರಾಮಯ್ಯ

0
Spread the love

ಬೆಳಗಾವಿ: ರವಿಯವರು ಬಳಸಿರುವ ಪದ ಕ್ರಿಮಿನಲ್ ಅಫೆನ್ಸ್ ಅನಿಸಿಕೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬೆಳಗಾವಿ ಸುವರ್ಣ ಸೌಧದ ಬಳಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಆ ಸಮಯದಲ್ಲಿ ತಾನು ಮೇಲ್ಮನೆಯಲ್ಲಿರಲಿಲ್ಲ, ಅದರೆ ಶಾಸಕರು ತಮಗೆ ವಿಷಯ ತಿಳಿಸಿದರು, ಲಕ್ಷ್ಮಿಯವರು ತುಂಬಾ ನೊಂದುಕೊಂಡಿದ್ದಾರೆ.

Advertisement

ಸಿ.ಟಿ.ರವಿ ತೀರಾ ಕೆಟ್ಟ ಪದ ಬಳಸಿದ್ದಾರೆ. ರವಿ ವಿರುದ್ಧ ಸೂಕ್ತ ಕ್ರಮ ಆಗಲೇಬೇಕು. ಈಗಾಗಲೇ ಸಭಾಪತಿಗೆ ಸಚಿವೆ ಹೆಬ್ಬಾಳ್ಕರ್​​ ದೂರು ನೀಡಿದ್ದಾರೆ ಎಂದು ತಿಳಿಸಿದರು. ಇನ್ನು ಸಿ.ಟಿ.ರವಿ ನೀಡಿರುವ ಹೇಳಿಕೆ ಕ್ರಿಮಿನಲ್​​​​ ಅಪರಾಧ. ಪೊಲೀಸರಿಗೂ ದೂರು ನೀಡಲಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕಾನೂನು ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here