HomeGadag Newsಯುವಕರ ಕಾರ್ಯ ಸ್ತುತ್ಯಾರ್ಹ

ಯುವಕರ ಕಾರ್ಯ ಸ್ತುತ್ಯಾರ್ಹ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗಂಜೀ ಬಸವಣ್ಣನ ಜಾತ್ರೆ ಅತ್ಯಂತ ವಿಜೃಂಭಣೆಯಿAದ ನಡೆಯುತ್ತಿದೆ. ಬಸವಣ್ಣನು ಈ ಉಸಕಿನ ಹಳ್ಳದಲ್ಲಿ ಗಂಜೀ ಹಾಕುವವನಿಗೆ ದೊರೆತದ್ದರಿಂದ ಈ ಪ್ರದೇಶದಲ್ಲಿ ಅದನ್ನು ಪ್ರತಿಷ್ಠಾಪನೆ ಮಾಡಿ 63 ವರ್ಷಗಳಿಂದ 6 ದಿನಗಳವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜಾತ್ರೋತ್ಸವ ಹಮ್ಮಿಕೊಂಡು ಓಣಿಯ ಯುವಕರು ಅತ್ಯಂತ ರಚನಾತ್ಮಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ನಗರದ ಉಸಗಿನಗಟ್ಟಿ ಓಣಿಯ ಶ್ರೀ ಗಂಜಿ ಬಸವೇಶ್ವರ ದೇವರ 63ನೇ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಉಪನ್ಯಾಸ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಜಾತ್ರಾ ಕಮಿಟಿಯ ಅಧ್ಯಕ್ಷ ಪ್ರಶಾಂತ ಎಸ್.ಶಾಬಾದಿಮಠ ವಹಿಸಿದ್ದರು. ಅಕ್ಬರಸಾಬ್ ಬಬರ್ಚಿ, ಫಕೀರಪ್ಪ ಹೆಬಸೂರ್, ರಾಮಣ್ಣ ಫಲದೊಡ್ಡಿ, ಮೆಹಬೂಬ್ ನದಾಫ್, ರವಿ ಕಮತರ, ಕರಬಸಯ್ಯ ನಾಲತ್ವಾಡಮಠ, ಬಸಪ್ಪ ಕಲಬಂಡಿ, ಹೆಚ್.ಕೆ. ಮುಲ್ಲಾ, ಅಶೋಕ್ ಮಂದಾಲಿ, ಬಿ.ಬಿ. ಅಸೂಟಿ ಮುಂತಾದವರು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!