ಹಾವೇರಿ: ನದಿಯಲ್ಲಿ ಹಸು ಮೈ ತೊಳೆಯಲು ನದಿಗೆ ಇಳಿದ ಯುವಕ ನೀರು ಪಾಲಾಗಿರುವ ಘಟನೆ ಹಾವೇರಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದಿದೆ. ಗಾಳೆಪ್ಪ ಮೇಲಿನಮನಿ 25 ವರ್ಷ ಮೃತ ಯುವಕನಾಗಿದ್ದು, ಹಂದಿಗನೂರು ಗ್ರಾಮದಲ್ಲಿರುವ ವರದ ನದಿಗೆ ಹಸು ಮೈ ತೊಳೆಯಲು ಯುವಕ ಹೋಗಿದ್ದಾನೆ.
ಮಲೆನಾಡಲ್ಲಿ ಮಳೆ ಹೆಚ್ಚಾದ ಪರಿಣಾಮ ನದಿಯಲ್ಲಿ ನೀರು ಹೆಚ್ಚಾಗಿದೆ. ನದಿ ಅಳಾ ತಿಳಿಯದೆ ಇಳಿದ ಆದ್ರೆ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿ ಮೃತ ಯುವಕ ಹುಡುಕಾಟ ನಡೆಸುತ್ತಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದೆ.



