ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿದೇಶಿ ಪ್ರಜೆಯಿಂದ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ರಿಜ್ವಾನ್ ಪಾಷಾ(25),ಕೃತಿಕ್ ಪ್ರೀತಮ್(25) ಬಂಧಿತ ಆರೋಪಿಗಳಾಗಿದ್ದು,
Advertisement
ಕಳೆದ ಏಪ್ರಿಲ್ 16 ರಂದು ಭದ್ರಪ್ಪ ಲೇ ಔಟ್ ಬಳಿ ಬ್ಯಾಗ್ ನಲ್ಲಿ ಹಣ ತೆಗೆದುಕೊಂಡು ಹೊರಟಿದ್ದ ಕ್ಯಾಮೆರೂನ್ ಮೂಲದ ಪ್ರಜೆಗೆ ಮಚ್ಚು ತೋರಿಸಿ ಹೋಂಡಾ ಆ್ಯಕ್ಟೀವಾ ಬೈಕ್ ಎಗರಿಸಿದ್ದರು. ನಂತರ ಹಿಂಬದಿಯಿಂದ ಬಂದು ಬ್ಯಾಗ್ ಕೂಡಾ ದೋಚಿ ಪರಾರಿಯಾಗಿದ್ದರು.
ಪ್ಯಾಟ್ರಿಸ್ ಕ್ಯಾಂಡೆಮ್ ಎಂಬಾತನಿಂದ ಹಣ ಮತ್ತು ಬೈಕ್ ಎಗರಿಸಿದ್ದರು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಟಿವಿಎಸ್ ಜುಪಿಟರ್ ಮತ್ತು ಎಗರಿಸಿದ್ದ ಆ್ಯಕ್ಟೀವಾ ಹಾಗೂ ವಿದೇಶಿ ಪ್ರಜೆಯ ಪಾಸ್ ಪೋರ್ಟ್ ಮತ್ತು 86 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.