ಚಿತ್ರದುರ್ಗ:- ಚಿತ್ರದುರ್ಗದ ಪ್ರಸಿದ್ಧ ಮುರುಘಾ ಮಠದಲ್ಲಿ ಕಳ್ಳತನ ನಡೆದಿದ್ದು, ಶಿವಮೂರ್ತಿ ಶರಣರ ಬೆಳ್ಳಿ ಮೂರ್ತಿಯನ್ನು ಕಳ್ಳರು ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ.
Davanagere: ಒಂದೇ ದಿನ 7 ಜನ ಸಾವು: ಸ್ಮಶಾನಕ್ಕಿಲ್ಲ ಜಾಗ, ಅಂತ್ಯಕ್ರಿಯೆಗೆ ಗ್ರಾಮಸ್ಥರ ಪರದಾಟ!
ಮುರುಘಾ ಮಠದ ದರ್ಬಾರ್ ಹಾಲ್ ನಲ್ಲಿ ಇಟ್ಟಿದ್ದ ಬೆಳ್ಳಿಮೂರ್ತಿ ಜುಲೈ 4ನೇ ತಾರೀಕಿನಿಂದ ನಾಪತ್ತೆ ಆಗಿದ್ದು, ಕಳ್ಳರ ಕೃತ್ಯ ಎಂದು ಶಂಕಿಸಲಾಗಿದೆ. ಇಲ್ಲಿನ ಶಿವಮೂರ್ತಿ ಶರಣರ ಪಟ್ಟಾಭಿಶೇಕದ 25 ನೇ ವರ್ಷಾಚರಣೆ ವೇಳೆ ಭಕ್ತರು ಈ ಬೆಳ್ಳಿ ಮೂರ್ತಿಯನ್ನು ಸ್ವಾಮೀಜಿಗಳಿಗೆ ಉಡುಗೊರೆ ರೂಪದಲ್ಲಿ ಕೊಟ್ಟಿದ್ದರು.
21 ಇಂಚು ಎತ್ತರವಿದ್ದ ಈ ಬೆಳ್ಳಿ ಮೂರ್ತಿ, ಸುಮಾರು 15 ಲಕ್ಷ ಮೌಲ್ಯ ಉಳ್ಳದ್ದು ಎಂದು ಅಂದಾಜಿಸಲಾಗಿದೆ. ಮಠದಲ್ಲಿನ ಸಿಸಿಟಿವಿ ಆಫ್ ಮಾಡಿ ಕಳ್ಳರು ಮೂರ್ತಿ ಕಳುವು ಮಾಡಿದ ಶಂಕೆ ವ್ಯಕ್ತವಾಗಿದೆ.
ಜುಲೈ 4ನೇ ತಾರೀಕಿನಿಂದ ಮೂರ್ತಿ ನಾಪತ್ತೆಯಾಗಿದ್ದು, ಮೂರ್ತಿ ಕಳುವು ಹಿನ್ನೆಲೆ ಮಠದಲ್ಲಿ ಶ್ರೀಗಳು ಸಭೆ ಕರೆದಿದ್ದಾರೆ. ಬಸವಕುಮಾರ ಸ್ವಾಮಿಜಿ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮಿಜಿ ಸೇರಿದಂತೆ ಮಠದ ಆಡಳಿತ ಮಡಳಿ, ಭಕ್ತರು, ಕೆಲಸಗಾರರು ಎಲ್ಲರೂ ಸಭೆಯಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿದೆ.