ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಅತಿಥಿ ಎಂದು ನಟನೆ ಮಾಡಿ ವಿದೇಶಿ ಪ್ರಜೆಗಳ ಬಳಿ ಹಣ, ಕರೆನ್ಸಿ ಕದ್ದಿದ್ದ ಆಂಧ್ರ ಮೂಲದ ಶ್ರೀನಿವಾಸುಲು ಎಂಬಾತನನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸುಲು ತನ್ನನ್ನು ಹೋಟೆಲ್ಗಳಿಗೆ ಬರುವ ಗೆಸ್ಟ್ ಎಂದು ತೋರಿಸಿಕೊಂಡಿದ್ದ.
ನಗರದ ಶಾಂಗ್ರೀಲಾ ಹೋಟೆಲ್ ಸೇರಿ ಹಲವು ಹೋಟೆಲ್ಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದನು. ಈ ವೇಳೆ ವಿದೇಶಿ ಪ್ರಜೆಯರ ಬಳಿ ಇದ್ದ ಹಣ, ವಿದೇಶಿ ಕರೆನ್ಸಿಗಳನ್ನು ಗುರಿಯಾಗಿಸಿ ಕದ್ದಿದ್ದನು.
ಇತ್ತೀಚೆಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಂಧನದ ವೇಳೆ ರೂ.41,000 ಮೌಲ್ಯದ ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಹೈಗ್ರೌಂಡ್ಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.



