ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ಮನೆಯಲ್ಲಿ ಇಟ್ಟಿದ ಚಿನ್ನಭಾರಣ ಕಳ್ಳತನ ಮಾಡಿದ್ದ ಗ್ಯಾಂಗ್ ಅನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
ಜ್ಞಾನ ಪ್ರಕಾಶ್. ಪ್ರೇಮ್ ಕುಮಾರ್ ಶಿವಕುಮಾರ್ ಸಂತೋಷ ಬಂಧಿತ ಆರೋಪಿಗಳಾಗಿದ್ದು, ಮನೆ ಮುಂದೆ ಚಪ್ಪಲಿ ಇಲ್ಲದೆ ಇರುವ ಮನೆಗಳು, ಲೇಟ್ ಆಫ್ ಆದ ಮನೆ, ಮನೆ ಮುಂದೆ ನ್ಯೂಸ್ ಪೇಪರ್ ಬಿದ್ದಿರುವ ಮನೆಗಳು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಒಂದೇ ಸಲ ಮಹದೇವಪುರ ವ್ಯಾಪ್ತಿಯಲ್ಲಿ ಆರು ಮನೆಗಳಲ್ಲಿ ಕಳ್ಳತನ ಮಾಡಿದ್ದರು.
ವರಮಹಾಲಕ್ಷ್ಮಿ ಹಬ್ಬಕ್ಕೆ ಅಂತ ಮನೆಯಲ್ಲಿ ಇಟ್ಟಿದ್ದ ವರಮಹಾಲಕ್ಷ್ಮಿ ಬೆಳ್ಳಿ ಮುಖವಾಡ, ಚಿನ್ನಭಾರಣ ಕಳ್ಳತನ ಮಾಡಿದ್ದರು. ಹಬ್ಬಕ್ಕೂ ಮುನ್ನವೇ ಐನಾತಿ ಕಳ್ಳರ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಚಿನ್ನಭಾರಣ ಮಾಲೀಕರ ಕೈ ಸೇರಿದೆ.
ಇನ್ನೂ ಆರೋಪಿಗಳ ಬಂಧನದಿಂದ 18 ಮನೆಕಳ್ಳತನ ಪ್ರಕರಣಗಳು ಬೆಳಕಿಗೆ ಬಂಧಿದ್ದು, ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.