ಚಿತ್ರದುರ್ಗ:- ಶ್ರೀಗಂಧದ ಮರಗಳನ್ನು ಕಡಿದು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Advertisement
ಆಂದ್ರಾ ಮೂಲದವರಾದ ಕೊಟ್ಟೂರಪ್ಪ, ಓಬಣ್ಣ, ಈರಣ್ಣ, ಚಳ್ಳಕೆರೆ ಮೂಲದ ಸಿದ್ದಣ್ಣ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಇನ್ನೂ ಕಳ್ಳತನ ಮಾಡಿದ್ದ 60 ಕೆಜಿ ಶ್ರೀಗಂಧ ಮರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸೆ.3 ರ ರಾತ್ರಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಇಕ್ಕನೂರು ಕುರುಬರ ಹಳ್ಳಿಯಲ್ಲಿ ಆರೋಪಿಗಳು, 3 ಶ್ರೀಗಂಧದ ಮರಗಳನ್ನ ಕಡಿದು ದೋಚಿಕೊಂಡು ಹೋಗಿದ್ದರು.
ಈ ಸಂಬಂಧ ದೂರು ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳ ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಹಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.