ಕಲ್ಲು ಸಕ್ಕರೆ ತನ್ನಿರೋ ಎನ್ನುವ ದಾಸರ ಪದವೇ ಇದೆ. ಇಂತಹ ಕಲ್ಲು ಸಕ್ಕರೆಯ ಸಣ್ಣ ಸಣ್ಣ ತುಂಡುಗಳನ್ನು ಹೋಟೆಲ್ ನಲ್ಲಿ ಊಟವಾದ ಬಳಿಕ ಸೋಂಪಿನ ಜತೆಗೆ ನೀಡುವರು. ಇದು ಜೀರ್ಣಕ್ರಿಯೆಗೆ ತುಂಬಾ ಲಾಭಕಾರಿ ಮತ್ತು ಬಾಯಿಗೆ ಸುವಾಸನೆ ಕೂಡ ನೀಡುವುದು.
ಕಲ್ಲು ಸಕ್ಕರೆಯನ್ನು ಕಬ್ಬಿನ ಸಿರಪ್ ನಿಂದ ಮಾಡಲಾಗುತ್ತದೆ. ಇದು ಆರೋಗ್ಯಕಾರಿ ಮಾತ್ರವಲ್ಲದೆ, ಟೇಬಲ್ ನಲ್ಲಿ ಇಡುವಂತಹ ಸಕ್ಕರೆಗೆ ಪರ್ಯಾಯವಾಗಿ ಇದನ್ನು ಬಳಕೆ ಮಾಡಬಹುದು. ಇಂತಹ ಕಲ್ಲುಸಕ್ಕರೆಯನ್ನು ನೀವು ಸೇವನೆ ಮಾಡಿದರೆ ಅದರಿಂದ ಯಾವೆಲ್ಲಾ ಲಾಭಗಳು ಸಿಗುವುದು ಎಂದು ನೀವು ತಿಳಿಯಿರಿ.
ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತೆ: ಸಾಕಷ್ಟು ಮಂದಿ ತಮ್ಮ ದೇಹದಲ್ಲಿ ಹೆಚ್ಚಾಗಿ ರಕ್ತವನ್ನು ಹೊಂದಿರುವುದಿಲ್ಲ. ಕಬ್ಬಿಣಾಂಶ ಕೂಡ ಕಡಿಮೆ ಹೊಂದಿರುತ್ತಾರೆ. ಆದರೆ ಇದು ಆರೋಗ್ಯಕ್ಕೆ ಅಪಾಯಕಾರಿ ಆಗಿದೆ. ಹಾಗಾಗಿ ಕಲ್ಲು ಸಕ್ಕರೆಯನ್ನು ಬಳಸುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ. ರಕ್ತ ಪರಿಚಲನೆ ಸರಿಯಾಗಿ ನಡೆಯುತ್ತದೆ. ಇದು ರಕ್ತಹೀನತೆ, ಆಲಸ್ಯ, ಆಯಾಸ ಮತ್ತು ತಲೆತಿರುಗುವಿಕೆಯಂತಹ ಕಾಯಿಲೆಗಳು ಉಂಟಾಗುವುದಿಲ್ಲ. ನೀವು ಇದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರೆ, ಇನ್ಮುಂದೆ ಕಲ್ಲು ಸಕ್ಕರೆಯನ್ನು ಬಳಸಿ.
ದೇಹದ ಶಕ್ತಿ ಹೆಚ್ಚಿಸಿ: ಬಾಯಿಗೆ ರುಚಿಕರ ನೀಡುವುದಷ್ಟೇ ಅಲ್ಲ ಕಲ್ಲು ಸಕ್ಕರೆ ನಮ್ಮ ದೇಹವನ್ನು ಸದೃಢಗೊಳಿಸುತ್ತದೆ. ಎಷ್ಟೇ ಕೆಲಸ ಮಾಡಿದರೂ ಚೈತನ್ಯದಿಂದ ಇರಬಲ್ಲೆವು. ಮನಸ್ಸನ್ನು ಉಲ್ಲಾಸಗೊಳಿಸಲು ಕಲ್ಲು ಸಕ್ಕರೆ ಉಪಯೋಗಿಸಿ.
ಮೂಗಿನ ರಕ್ತಸ್ರಾವಕ್ಕೆ ಪರಿಹಾರ: ಕೆಲವರಿಗೆ ಮೂಗಿನಲ್ಲಿ ರಕ್ತಸ್ರಾವವಾಗುತ್ತದೆ. ಅವರು ಕಲ್ಲು ಸಕ್ಕರೆಯನ್ನು ಆಗಾಗ್ಗೆ ಬಳಸಬೇಕು. ಆಗ ತಕ್ಷಣವೇ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಜೀರ್ಣಕ್ರಿಯೆಗೆ ಒಳ್ಳೆಯದು: ಅಜೀರ್ಣ ಮತ್ತು ಮಲಬದ್ಧತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಕಲ್ಲು ಸಕ್ಕರೆ ಬಳಸಿದರೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗಾಗಿ ನೀವು ಪ್ರತಿನಿತ್ಯ ಕಲ್ಲು ಸಕ್ಕರೆ ತಿನ್ನುವುದನ್ನು ರೂಢಿ ಮಾಡಿಕೊಳ್ಳಿ.
ಕೆಮ್ಮು ಮತ್ತು ಶೀತ: ಕೆಮ್ಮು ಮತ್ತು ನೆಗಡಿ ಆಗಾಗ್ಗೆ ಬರುತ್ತಲೇ ಇರುತ್ತದೆ. ಇದು ವಯಸ್ಕರಿಗೆ ತುಂಬಾ ತೊಂದರೆಯನ್ನುಂಟು ಮಾಡುತ್ತದೆ. ಇಂತಹ ಸಮಸ್ಯೆಯಿದ್ದರೆ, ಕರಿಮೆಣಸಿನ ಪುಡಿ, ಜೇನುತುಪ್ಪ ಮತ್ತು ಹರಳೆಣ್ಣೆ ಪುಡಿಯನ್ನು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ರಾತ್ರಿ ಹೊತ್ತು ತಿನ್ನಿ. ಇದರಿಂದ ಉತ್ತಮ ಫಲಿತಾಂಶ ದೊರೆಯಲಿದೆ. ಕರಿಮೆಣಸಿನ ಪುಡಿ ಮತ್ತು ಕಲ್ಲು ಸಕ್ಕರೆ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಬೆಳಗ್ಗೆ ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ.